ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು, ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಹಲವು ಘಟನೆಗಳ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಹುತೇಕ ಪ್ರಕರಣಗಳಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದವರು ಪೊಲೀಸ್ ದೂರು ನೀಡಲು ಮುಂದಾಗುವುದಿಲ್ಲ.
ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪ್ರಕರಣದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿ ತನ್ನ ಸೈಕಲ್ ನಿಲ್ಲಿಸಿ ಬೈಕಿನಲ್ಲಿದ್ದ ಕಾಮುಕನಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಕ್ರಮಕ್ಕೆ ಮುಂದಾದ ಪೊಲೀಸರು ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದ್ದು, ಶಾಲೆಯಿಂದ ತನ್ನ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೈಕಿನಲ್ಲಿದ್ದ ಇಬ್ಬರು ಕಾಮುಕರು ಕಿರುಕುಳ ನೀಡಿದ್ದಾರೆ. ಬಳಿಕ ಸ್ವಲ್ಪ ಮುಂದೆ ಬಂದ ಅವರುಗಳು ಅಂಗಡಿವೊಂದರ ಬಳಿ ಬೈಕ್ ನಿಲ್ಲಿಸಿದ್ದು, ಒಬ್ಬ ಇಳಿದು ಹೋದರೆ ಮತ್ತೊಬ್ಬ ಬೈಕಿನ ಮೇಲೆಯೇ ಕುಳಿತಿದ್ದ. ಆಗ ಅಲ್ಲಿಗೆ ಬಂದ ವಿದ್ಯಾರ್ಥಿನಿ ತನ್ನ ಸೈಕಲ್ ನಿಲ್ಲಿಸಿ ಕಾಮುಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಆತನು ಕೂಡ ಆಕೆಗೆ ಹೊಡೆದಿದ್ದು, ಅಷ್ಟರಲ್ಲಾಗಲೇ ಆಗಮಿಸಿದ ಸ್ಥಳೀಯರು ಇದನ್ನು ತಡೆದಿದ್ದಾರೆ. ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ವಿದ್ಯಾರ್ಥಿನಿಯ ಧೈರ್ಯಕ್ಕೆ ಮೆಚ್ಚಿಕೊಂಡಿದ್ದಾರೆ.
https://twitter.com/Nishantjournali/status/1820649378849370221?ref_src=twsrc%5Etfw%7Ctwcamp%5Etweetembed%7Ctwterm%5E1820649378849370221%7Ctwgr%5Ee6cc76c86add852a3af47c04931fff99eb327473%7Ctwcon%5Es1_&ref_url
https://twitter.com/bulandshahrpol/status/1820710516290986428?ref_src=twsrc%5Etfw%7Ctwcamp%5Etweetembed%7Ctwterm%5E1820710516290986428%7Ctwgr%5Ee6cc76c86add852a3af47c04931fff99eb327473%7Ctwcon%5Es1_&ref_url
https://twitter.com/bulandshahrpol/status/1820758632285278617?ref_src=twsrc%5Etfw%7Ctwcamp%5Etweetembed%7Ctwterm%5E1820758632285278617%7Ctwgr%5Ee6cc76c86add852a3af47c04931fff99eb327473%7Ctwcon%5Es1_&ref_url=