BREAKING NEWS: ಕಾರ್ -ಟ್ರಕ್ ಡಿಕ್ಕಿಯಾಗಿ ಭಾರಿ ಸ್ಪೋಟ: 8 ಮಂದಿ ಸಜೀವ ದಹನ

ಉತ್ತರ ಪ್ರದೇಶದ ಬರೇಲಿ-ನೈನಿತಾಲ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಡಂಪರ್ ಮತ್ತು ಕಾರ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಎಂಟು ಜನರು ಸಜೀವ ದಹನಗೊಂಡಿದ್ದಾರೆ.

ಉತ್ತರಾಖಂಡದ ಕಿಚ್ಚಾದಿಂದ ಮರಳು ಮತ್ತು ಜಲ್ಲಿಕಲ್ಲು ಸಾಗಿಸುತ್ತಿದ್ದ ಡಂಪರ್‌ ಗೆ ಕಾರ್ ಡಿಕ್ಕಿಯಾಗಿ ಟೈರ್ ಒಡೆದ ಕಾರಣ ಅಪಘಾತ ಸಂಭವಿಸಿದೆ.

ಘರ್ಷಣೆಯ ನಂತರ ಸ್ಫೋಟ

ಡಿಕ್ಕಿಯ ನಂತರ ಭಾರಿ ಸ್ಫೋಟ ಸಂಭವಿಸಿದ್ದು, ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು. ಆದರೆ, ಕಾರ್ ಒಳಗಿನಿಂದ ಲಾಕ್ ಆಗಿದ್ದರಿಂದ ಕಾರ್ ನೊಳಗೆ ಸಿಲುಕಿದ್ದ ಎಲ್ಲ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

ಅಪಘಾತದಲ್ಲಿ ಎಂಟು ಮಂದಿ ಸಾವು

ಕಾರ್ ನಲ್ಲಿದ್ದ ಎಂಟು ಮಂದಿ ಬರೇಲಿಯಿಂದ ಬಹೇರಿಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರ್ ನಲ್ಲಿದ್ದ ಎಲ್ಲರ ಸಾವನ್ನು ಎಸ್‌ಎಸ್‌ಪಿ ಖಚಿತಪಡಿಸಿದ್ದಾರೆ. ಪೊಲೀಸ್ ತಂಡವು ಎಲ್ಲಾ ದೇಹಗಳನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಅಪಘಾತದಲ್ಲಿ ಮಗುವೂ ಸಾವನ್ನಪ್ಪಿದೆ. ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read