ರೈಲ್ವೆ ಆವರಣದಲ್ಲಿ ಮಲಗಿದ್ದ ಕೂಲಿಯೊಬ್ಬನ ಮೇಲೆ ಇಬ್ಬರು ಪೊಲೀಸರು ದರ್ಪ ತೋರಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಕರ್ತವ್ಯದಲ್ಲಿದ್ದ ಪೊಲೀಸರು ಮಲಗಿದ್ದ ವ್ಯಕ್ತಿಯ ಮೇಲೆ ದರ್ಪ ತೋರಿರುವ ಘಟನೆ ಮಥುರಾ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಒಬ್ಬ ಪೊಲೀಸ್ ನಿದ್ರಿಸುತ್ತಿದ್ದ ವ್ಯಕ್ತಿಯ ಮುಖದ ಮೇಲೆ ಟಾರ್ಚ್‌ಲೈಟ್ ಬಿಟ್ಟರೆ ಮತ್ತೊಬ್ಬ ಪೊಲೀಸ್ ದುರಹಂಕಾರದಿಂದ ಆ ವ್ಯಕ್ತಿಯ ಕಾಲಿಗೆ ತನ್ನ ಶೂ ಉಜ್ಜಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ಅಲ್ಲಿದ್ದ ಇತರ ಪೋಲೀಸರು ಕೂಡ ಯಾವುದೇ ಪ್ರತಿರೋಧವಿಲ್ಲದೆ ಕೇವಲ ನಿಂತುಕೊಂಡು ಸನ್ನಿವೇಶವನ್ನು ವೀಕ್ಷಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಲೇ, ಈ ಬಗ್ಗೆ ಪೊಲೀಸ್ ಇಲಾಖೆ ಪ್ರತಿಕ್ರಿಯಿಸಿದೆ. ‘ನಿನ್ನೆ ಜಿಆರ್‌ಪಿ ಪೊಲೀಸ್ ಮಥುರಾ ಜೆಎನ್‌ನಿಂದ ಇಬ್ಬರು ಕಾನ್ಸ್‌ಟೇಬಲ್‌ಗಳು ನಿದ್ರಿಸುತ್ತಿರುವ ವ್ಯಕ್ತಿಯ ಜೊತೆ ಕೆಟ್ಟದಾಗಿ ವರ್ತಿಸುತ್ತಿರುವ ವೀಡಿಯೊ ನಮ್ಮ ಗಮನಕ್ಕೆ ಬಂದಿದೆ. ಇದು ಹಳೆಯ ವೀಡಿಯೊ ಎಂದು ಗಮನಿಸಲಾಗಿದೆ. ಪ್ರಕರಣವನ್ನು ಸ್ಕ್ಯಾನರ್‌ನಲ್ಲಿ ನಡೆಸಲಾಗುತ್ತಿದೆ. ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದರು. ನಂತರ ವಿಚಾರಣೆ ಮುಗಿದ ಬಳಿಕ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
https://twitter.com/AmirqadriAgra/status/1641602862496243712?ref_src=twsrc%5Etfw%7Ctwcamp%5Etweetembed%7Ctwterm%5E1641602862496243712%7Ctwgr%5E72dca102b42be53ee8271c15e887278651af31f9%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-up-cop-flashes-torchlight-on-man-sleeping-in-mathura-railway-station-rubs-his-shoe-to-wake-him-up