Viral Video | ʼಟೊಮ್ಯಾಟೋʼವನ್ನೇ ಕಿವಿಯೋಲೆ ಮಾಡಿಕೊಂಡ ಉರ್ಫಿ ಜಾವೇದ್​: ಟ್ರೋಲ್​ ಮಾಡಿದ ನೆಟ್ಟಿಗರು

ತಮ್ಮ ವಿಚಿತ್ರ ಫ್ಯಾಶನ್​ ಸೆನ್ಸ್​ ಮೂಲಕ ಸುದ್ದಿಯಲ್ಲಿರುವ ನಟಿ ಹಾಗೂ ಬಿಗ್​ಬಾಸ್​ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್​ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಸುದ್ದಿಯಲ್ಲಿರ್ತಾರೆ. ಇದೀಗ ಮತ್ತೊಂದು ವಿಚಾರವಾಗಿ ಉರ್ಫಿ ಜಾವೇದ್​ ಸುದ್ದಿಯಲ್ಲಿದ್ದು ಟೊಮೊಟೋವನ್ನು ತನ್ನ ಕಿವಿಯೋಲೆಯಾಗಿ ಧರಿಸಿ ಕ್ಯಾಮರಾ ಕಣ್ಣಿಗೆ ಪೋಸ್​ ನೀಡಿದ್ದಾರೆ.

ಟೊಮ್ಯಾಟೋದೊಂದಿಗೆ ಪೋಸ್​ ನೀಡುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ನಟಿ ಉರ್ಫಿ ಜಾವೇದ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ವಿಡಿಯೋದಲ್ಲಿ ಅವರು ಟೊಮ್ಯಾಟೋ ಹಣ್ಣನ್ನು ತಿನ್ನುತ್ತಿರೋದನ್ನು ಸಹ ಕಾಣಬಹುದಾಗಿದೆ.

ಈ ಫೊಟೋಗಳಿಗೆ ಉರ್ಫಿ ಜಾವೇದ್​​ ಟೊಮ್ಯಾಟೋಗಳು ಹೊಸ ಚಿನ್ನವಿದ್ದಂತೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಶೇರ್​ ಮಾಡುತ್ತಿದ್ದಂತೆಯೇ ಅನೇಕರು ಉರ್ಫಿಯನ್ನು ಟ್ರೋಲ್​ ಮಾಡಿದ್ದಾರೆ. ಇದೊಂದು ಈ ಕಣ್ಣಲ್ಲಿ ನೋಡುವುದು ಬಾಕಿ ಇತ್ತು. ಈಗ ಅದೂ ಆಯ್ತು ಎಂದು ಅನೇಕರು ಕಾಮೆಂಟ್​ ಮಾಡಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಸರಾಸರಿಗಿಂತ ಹೆಚ್ಚಿನ ತಾಪಮಾನ ಸೇರಿದಂತೆ ಪ್ರತಿಕೂಲ ಹವಾಮಾನದಿಂದಾಗಿ ಟೊಮ್ಯಾಟೋ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಟೊಮ್ಯಾಟೋ ದರ ಐದು ಪಟ್ಟು ಹೆಚ್ಚಾಗಿದೆ. ಜೂನ್​ ಮತ್ತು ಜುಲೈ ತಿಂಗಳಲ್ಲಿ ಟೊಮ್ಯಾಟೋಗಳು ಸಾಮಾನ್ಯವಾಗಿ ದುಬಾರಿಯಾಗುತ್ತದೆ. ಆದರೆ ಈ ವರ್ಷ ಮಾತ್ರ ಟೊಮ್ಯಾಟೋ ದಾಖಲೆಯ ಬೆಲೆಗೆ ಏರಿಕೆಯಾಗಿದೆ.

https://youtu.be/kR74KbHwhr4

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read