ಸಿಂಪಲ್ ಉಡುಗೆಯಲ್ಲಿ ಉರ್ಫಿ ಜಾವೇದ್; ಜನರಿಗೆ ಅಚ್ಚರಿಯೋ ಅಚ್ಚರಿ…!

ಚಿತ್ರ ವಿಚಿತ್ರ, ಅಸಾಧಾರಣ ಫ್ಯಾಷನ್ ನಿಂದ್ಲೇ ಉರ್ಫಿ ಜಾವೇದ್ ಹೆಸರು ಮಾಡಿದ್ದಾರೆ. ಆಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಜನ ಹುಬ್ಬೇರಿಸಿ ಆಕೆಯ ಡ್ರೆಸ್ ನೋಡುತ್ತಾರೆ. ಅಷ್ಟು ವಿಚಿತ್ರ ಮತ್ತು ವಿಶೇಷವಾಗಿರುತ್ತೆ ಆಕೆ ಧರಿಸುವ ಉಡುಪು.

ಇಂತಹ ಉರ್ಫಿಯನ್ನು ಸಾಧಾರಣ ಉಡುಪಿನಲ್ಲಿ ನೋಡುವುದು ಬಹಳ ಅಪರೂಪ. ಅದಾಗ್ಯೂ, ಆ ಸಾಂದರ್ಭಿಕ ಕ್ಷಣವನ್ನು ಮುಂಬೈನಲ್ಲಿ ಕೆಲವು ಪಾಪರಾಜಿಗಳು ಆಕೆ ಕಂಡ ತಕ್ಷಣ ನಿಲ್ಲಿಸಿ ಸೆರೆಹಿಡಿದಿದ್ದಾರೆ. ಸ್ವಲ್ಪ ಉದ್ದದ ಟೀ ಶರ್ಟ್, ಶಾರ್ಟ್ ಮಿಡಿಯಲ್ಲಿ ಕಾಣಿಸಿಕೊಂಡಿರುವ ಆ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಬಳಿಕ ಸಾಕಷ್ಟು ಕುತೂಹಲ ಮಾಡಿಸಿದೆ.

ವಿಡಿಯೋ ನೋಡಿದ ಕೆಲವರು ಈ ಡ್ರೆಸ್ ನಲ್ಲಿ ಉರ್ಫಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು ಎಂದಿದ್ದಾರೆ. ಹಲವರು ಈಗ ಉರ್ಫಿ ಸಾಮಾನ್ಯ ಮನುಷ್ಯರಂತೆ ಕಂಡಿದ್ದಾರೆ ಎಂದಿದ್ದಾರೆ. ವಿಡಿಯೋದಲ್ಲಿ ಛಾಯಾಗ್ರಾಹಕರೊಂದಿಗೆ ಮಾತನಾಡುವಾಗ, ಅಂತಹ ಬಟ್ಟೆಗಳನ್ನು ಧರಿಸಲು ತಾನು ಇಷ್ಟಪಡುವುದಿಲ್ಲ ಎಂದು ಉರ್ಫಿ ಹೇಳುವುದನ್ನು ಸಹ ಕೇಳಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read