ರವಿಚಂದ್ರನ್ ಅಶ್ವಿನ್ ಚಿತ್ರ​ ರಚಿಸಿದ ಅಭಿಮಾನಿ: ಇದು ಪೇಂಟಿಂಗ್ ಅಂದರೆ ನಂಬುವುದೂ ಕಷ್ಟ

ಭಾರತದ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಕೌಶಲ್ಯ ಮತ್ತು ಆಟದ ಮೇಲಿನ ಸಮರ್ಪಣೆಯಿಂದಾಗಿ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇತ್ತೀಚೆಗೆ, ಅವರು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ 450 ಟೆಸ್ಟ್ ವಿಕೆಟ್‌ಗಳ ಹೆಗ್ಗುರುತನ್ನು ದಾಟಿದರು ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಳಲ್ಲಿ 100 ವಿಕೆಟ್‌ಗಳನ್ನು ಪಡೆದ ಇತಿಹಾಸದಲ್ಲಿ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡರು.

ಇದರ ಮಧ್ಯೆ ಅವರ ಅಭಿಮಾನಿಯೊಬ್ಬ ರವಿಚಂದ್ರನ್​ ಅವರ ಭಾವಚಿತ್ರ ರಚಿಸಿದ್ದಾರೆ. ಇದು ಪೇಂಟಿಂಗ್​ ಎಂದು ಹೇಳಿದರೆ ಯಾರೂ ನಂಬದಷ್ಟು ಅದ್ಭುತವಾಗಿದೆ. ಖುದ್ದು ರವಿಚಂದ್ರನ್​ ಅವರ ಫೋಟೋ ಕ್ಲಿಕ್ಕಿಸಿ ಇಟ್ಟಂತೆ ಭಾಸವಾಗುತ್ತದೆ.

ಮೊದಲ ನೋಟದಲ್ಲಿ, ಇದು ಚಿತ್ರಕಲೆ ಅಥವಾ ಛಾಯಾಚಿತ್ರ ಎಂದು ಲೆಕ್ಕಾಚಾರ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ರವಿಚಂದ್ರನ್​ ಅವರು ಕೈಯಲ್ಲಿ ಚೆಂಡನ್ನು ಹಿಡಿದುಕೊಂಡು ನೀಲಿ ಜೆರ್ಸಿಯನ್ನು ಧರಿಸಿದ್ದಾರೆ. ಅಭಿಮಾನಿಯ ಈ ಪ್ರತಿಭೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶ್ಲಾಘನೆಗಳ ಸುರಿಮಳೆಯೇ ಆಗಿದೆ.

https://twitter.com/WG_RumblePants/status/1626477021575491585?ref_src=twsrc%5Etfw%7Ctwcamp%5Etweetembed%7Ctwterm%5E1626477021575491585%7Ctwgr%5Ebfc94ecde24db147a22bdc7a9b414ad165d29129%7Ctwcon%5Es1_&ref_url=https%3A%2F%2Fwww.ndtv.com%2Foffbeat%2Funreal-fan-makes-cricketer-ravichandran-ashwins-portrait-internet-impressed-3793777

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read