ಕುತೂಹಲಕಾರಿಯಾಗಿದೆ ಊಬರ್‌ ಕ್ಯಾಬ್ ನಲ್ಲಿ ಪ್ರಯಾಣಿಕರು ಮರೆತು ಬಿಟ್ಟುಹೋದ ವಸ್ತುಗಳ ಪಟ್ಟಿ

ತನ್ನ ಕ್ಯಾಬ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಏನಾದರೂ ತಮ್ಮ ವಸ್ತುಗಳನ್ನು ಮರೆತು ಕ್ಯಾಬ್‌ನಲ್ಲಿ ಬಿಟ್ಟು ಹೋದಲ್ಲಿ, ಅವುಗಳನ್ನು ಹಿಂದಿರುಗಿಸುವ ವ್ಯವಸ್ಥೆ ಮೂಲಕ ಗಮನ ಸೆಳೆದಿದೆ ಊಬರ್‌. ಒಂದು ವೇಳೆ ನೀವು ಊಬರ್‌ ಕ್ಯಾಬ್‌ನಲ್ಲಿ ನಿಮ್ಮ ವಸ್ತುವನ್ನು ಮರೆತು ಹೋದಲ್ಲಿ, ಚಾಲಕನಿಗೆ ಕರೆ ಮಾಡಿ ತಿಳಿಸಿದಲ್ಲಿ ಅದು ನಿಮಗೆ ಸಿಗುವ ಸಾಧ್ಯತೆ ಇರುತ್ತದೆ.

2023 ಊಬರ್‌ ಲಾಸ್ಟ್ & ಫೌಂಡ್ ಇಂಡೆಕ್ಸ್‌‌ ಬಿಡುಗಡೆ ಮಾಡಿರುವ ಕ್ಯಾಬ್ ಸೇವೆ ದಿಗ್ಗಜ, ಜಗತ್ತಿನಾದ್ಯಂತ ತನ್ನ ಗ್ರಾಹಕರು ಕ್ಯಾಬ್‌ಗಳಲ್ಲಿ ಪ್ರತಿನಿತ್ಯ ಸಾಮಾನ್ಯವಾಗಿ ಮರೆತು ಬಿಟ್ಟು ಹೋಗುವ ವಸ್ತುಗಳ ಪಟ್ಟಿ ಮಾಡಿದೆ.

ಹೀಗೆ ಪ್ರಯಾಣಿಕರು ಕ್ಯಾಬ್‌ಗಳಲ್ಲಿ ಮರೆತು ಹೋಗುವ ಟಾಪ್ 10 ವಸ್ತುಗಳಲ್ಲಿ ಬಟ್ಟೆಗಳು, ಫೋನ್‌ಗಳು, ಬ್ಯಾಕ್‌ ಪ್ಯಾಕ್‌ಗಳು ಮತ್ತು ಪರ್ಸ್‌ಗಳು, ವ್ಯಾಲೆಟ್‌, ಹೆಡ್‌ಫೋನ್‌, ಆಭರಣ, ಕೀಗಳು, ಪುಸ್ತಕಗಳು, ಲ್ಯಾಪ್ಟಾಪ್‌ಗಳು ಹಾಗೂ ಕೈಗಡಿಯಾರ ಸೇರಿವೆ. ಆತುರದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಈ ವಸ್ತುಗಳನ್ನು ಪ್ರಯಾಣಿಕರು ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ.

ಕೆಲವೊಮ್ಮೆ ನಾವು ಊಹಿಸಲೂ ಸಾಧ್ಯವಿಲ್ಲದ ವಸ್ತುಗಳನ್ನು ಪ್ರಯಾಣಿಕರು ಊಬರ್‌ ಕ್ಯಾಬ್‌ಗಳಲ್ಲಿ ಬಿಟ್ಟು ಹೋಗುತ್ತಾರೆ. ಪಿಜ್ಝಾದ ತುಂಡು, ನಕಲಿ ರಕ್ತ, ತೂಕ ಕಳೆದುಕೊಳ್ಳುವ ಮಾರ್ಗಸೂಚಿ, ಪ್ರಿಂಟರ್‌, ರಿಮೋಟ್ ಕಂಟ್ರೋಲ್‌ ಇರುವ ವೈಬ್ರೇಟರ್‌, ಮಡದಿಯ ಪೇಂಟಿಂಗ್ ಕಲಾಕೃತಿಗಳಂಥ ವಸ್ತುಗಳನ್ನು ಸಹ ಗ್ರಾಹಕರು ತನ್ನ ಕ್ಯಾಬ್‌ಗಳಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಊಬರ್‌ ತನ್ನ ವರದಿ ಮೂಲಕ ತಿಳಿಸಿದೆ.

ಜಗತ್ತಿನಾದ್ಯಂತ ಇರುವ ತನ್ನ ಸೇವೆಗಳನ್ನು ಬಳಸುವ ಗ್ರಾಹಕರು ಏನೆಲ್ಲಾ ವಸ್ತುಗಳನ್ನು ಬಿಟ್ಟು ಹೋಗಿರುತ್ತಾರೆ ಎಂಬ ಇಂಟರೆಸ್ಟಿಂಗ್ ವಿಚಾರವನ್ನು ಊಬರ್‌‌ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಬೆಡ್‌ ಶೀಟ್‌, ಆಪಲ್ ಪೆನ್‌ಗಳು, ಬಚ್ಚಲುಮನೆ ಶೆಲ್ಫ್‌, ಉಡುಗೊರೆ ಡಬ್ಬ, ಕಪ್ಪು ಬೆಲ್ಟ್‌, ರಕ್ತದೊತ್ತಡ ಪರೀಕ್ಷೆ ಮಾಡುವ ಯಂತ್ರ, ಡಾಲ್ಫಿನ್ ಕೈಗೊಂಬೆ, ನಾಯಿಗೆ ಹಾಕುವ ಆಹಾರಗಳು ಇದರಲ್ಲಿ ಸೇರಿವೆ.

ನಾವು ಆತುರದಲ್ಲಿರುವ ವೇಳೆ, ಅಥವಾ ಆತಂಕ/ಅತೀವ ಸಂತಸದಲ್ಲಿದ್ದಾಗ ಏನನ್ನು ಮರೆಯುತ್ತೇವೆ ಎಂಬುದೇ ಗೊತ್ತಿರುವುದಿಲ್ಲ. ಹೀಗೆ, ಊಬರ್‌ನ ಪ್ರಯಾಣಿಕರೂ ಸಹ ಒಬ್ಬೊಬ್ಬರು ಒಂದೊಂದು ಮೂಡ್‌ನಲ್ಲಿರುವ ವೇಳೆ ಮರೆತು ಹೋಗಿರುವ ವಸ್ತುಗಳ ಪಟ್ಟಿಯನ್ನು ಈ ವರದಿ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read