ಬೆಂಗಳೂರು: ತಮ್ಮದೇ ಆದ ಮಾತಿನ ಶೈಲಿ, ನಗೆ ಚಟಾಕಿಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದ ಹಿರಿಯ ಹಾಸ್ಯ ನಟ ಉಮೇಶ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಪರೀಕ್ಷೆ ವೇಳೆ ಅವರಿಗೆ ಕ್ಯಾನ್ಸರ್ ಇರುವ ಬಗ್ಗೆ ಗೊತ್ತಾಗಿದೆ.
ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ಉಮೇಶ್ ಗಂಭೀರವಾಗಿ ಗಾಯಗೊಂಡಿದ್ದರು. 80 ವರ್ಷ ಉಮೇಶ್ ಅವರನ್ನು ಶಾಂತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಪರೀಕ್ಷೆ, ಸ್ಕ್ಯಾನಿಂಗ್ ಮಾಡುವ ವೇಳೆ ಲಿವರ್ ನಲ್ಲಿ ಅಪಾಯಕಾರಿ ಗಡ್ಡೆ ಇರುವುದು ಗೊತ್ತಾಗಿದೆ. ಈ ಬಗ್ಗೆ ಪರೀಕ್ಷಿಸಿದಾಗ ಅದು ಕ್ಯಾನ್ಸರ್ ಗಡ್ಡೆ ಎಂಬುದು ತಿಳಿದು ಕುಟುಂಬದವರಿಗೂ ಶಾಕ್ ಆಗಿದೆ.
ವೈದ್ಯರ ಪ್ರಕಾರ ಲಿವರ್ ನಲ್ಲಿ ಕ್ಯಾನ್ಸರ್ ಗಡ್ಡೆ ಇದ್ದು, ಅದು ನಾಲ್ಕನೇ ಹಂತ ತಲುಪಿದೆ. ಬೇರೆ ಅಂಗಗಳಿಗೂ ಹರಡಿದೆ. ಉಮೇಶ್ ಅವರು ನೋಡಲು ಆರೋಗ್ಯವಾಗಿಯೇ ಕಾಣುತ್ತಿದ್ದಾರೆ. ಅವರಿಗೆ ಕ್ಯಾನ್ಸ್ ಇದೆ. ಮತ್ತೊಮ್ಮೆ ಇದನ್ನು ಖಚಿತ ಪಡಿಸಲು ಇನ್ನೂ ಕೆಲ ಟೆಸ್ಟ್ ಗಳನ್ನು ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಕಿಮೋಥೆರಫಿ, ಇಮಿನೊಥೆರಪಿ ಮಾಡಬೇಕು. ಕ್ಯಾನ್ಸರ್ ಸ್ಪೆಷಲಿಸ್ಟ್ ಗಳನ್ನು ಕರೆಸಲಾಗಿದೆ. ಇಂಜಕ್ಷನ್ ಮೂಲಕವೇ ಗಡ್ಡೆ ಕರಗಿಸುವ ಪ್ರಯತ್ನ ನಡೆಯುತ್ತಿದೆ. ರಿಕವರಿ ಆಗುವ ಸಾಧ್ಯತೆ ಇದೆ. ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.