ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಅನಗತ್ಯ ತಿಕ್ಕಾಟವು ಇಡೀ ಜಗತ್ತಿಗೆ ವಿನಾಶದ ಹಾದಿಯನ್ನ ಕರುಣಿಸುತ್ತಿದೆ. ಶಾಂತಿ ಒಪ್ಪಂದದ ಮೂಲಕ ಯುದ್ಧ ನಿಲ್ಲಿಸಲು ಎರಡೂ ದೇಶಗಳು ಸಿದ್ಧವಿಲ್ಲ, ಆ ಕಡೆ ಉಕ್ರೇನ್ ಪದೇ ಪದೇ ರಷ್ಯಾ ಸೇನೆಯ ಕೆಣಕುವ ಕೆಲಸ ಮಾಡುತ್ತಿದೆ, ಇನ್ನೊಂದು ಕಡೆ ರೊಚ್ಚಿಗೆದ್ದು ಮರುದಾಳಿ ಮಾಡುತ್ತಿರುವ ರಷ್ಯಾ ತನ್ನ ಶತ್ರು ದೇಶದ ವಿನಾಶಕ್ಕೆ ಕಾಯುತ್ತಿದೆ. ಆದರೆ ಹೀಗೆ ಇಬ್ಬರ ನಡುವಿನ ಈ ತಿಕ್ಕಾಟದಲ್ಲಿ ಜನ ಸಾಮಾನ್ಯರು & ಇಡೀ ಜಗತ್ತು ಭಯದಲ್ಲಿ ನಡುಗುವಂತೆ ಆಗಿದೆ. ಇದೇ ವೇಳೆ ಪರಮಾಣು ವಿನಾಶದ ಕುರಿತು ಉಕ್ರೇನ್ ಸೇನೆ ಇದೀಗ ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡಿದೆ.
ಇರಾನ್ ಯುದ್ಧ ನಿಂತು ಹೋಗಿದ್ದರೂ ಉಕ್ರೇನ್ & ರಷ್ಯಾ ನಡುವಿನ ತಿಕ್ಕಾಟಕ್ಕೆ ಬ್ರೇಕ್ ಬೀಳುತ್ತಿಲ್ಲ, 4 ವರ್ಷಗಳಿಂದ ಸತತವಾಗಿ ಈ ಯುದ್ಧ ನಡೆಸಿ ಇದೀಗ 5ನೇ ವರ್ಷವನ್ನು ಕೂಡ ಬಹುತೇಕ ಅರ್ಧ ಭಾಗಕ್ಕೆ ತಂದು ನಿಲ್ಲಿಸಿವೆ ರಷ್ಯಾ & ಉಕ್ರೇನ್ ಸೇನೆಗಳು. ಹೀಗಿದ್ದಾಗ ರಷ್ಯಾ ತನ್ನ ಡ್ರೋನ್‌ಗಳ ಮೂಲಕ ಡೆಡ್ಲಿ ದಾಳಿ ಮುಂದುವರಿಸಿದೆ. ಅದರಲ್ಲೂ ಇದೇ ರಷ್ಯಾ ಸೇನೆ ಹಾರಿಸಿದ ಡ್ರೋನ್‌ಗಳು ನೇರವಾಗಿ ಚರ್ನೋಬಿಲ್ ಅಣುಸ್ಥಾವರದ ಮೇಲೆ ಬಂದು ದಾಳಿ ಮಾಡಿವೆ, ಇದು ದೊಡ್ಡ ವಿನಾಶಕ್ಕೆ ದಾರಿ ಮಾಡಿಕೊಡಲಿದೆ ಎಂದು ಉಕ್ರೇನ್ ಆರೋಪ ಮಾಡಿದೆ. ಅದರಲ್ಲೂ ಉಕ್ರೇನ್ ಸೇನೆ ಇದೀಗ ರಷ್ಯಾ ವಿರುದ್ಧ ಘೋರ ದಾಳಿಗೆ ಸಿದ್ಧತೆಯ ಆರಂಭಿಸಿದ್ದು, ಇಂತಹ ಸಮಯದಲ್ಲೇ ರಷ್ಯಾ ಕೂಡ ಪರಮಾಣು ದಾಳಿಗೆ ಮುಂದಾಗಿದೆಯಾ? ಎಂಬ ಅನುಮಾನ ಮೂಡಿಸಿದೆ.


