ಯುಕೆ ಮಕ್ಕಳ ಕ್ಲಬ್‌ನಲ್ಲಿ ‘ಭಯಾನಕ’ ದಾಳಿ: ಸಾಮೂಹಿಕ ಇರಿತದಿಂದ ಮಕ್ಕಳು ಸೇರಿದಂತೆ 8 ಮಂದಿ ಗಾಯ

ಲಂಡನ್: ಯುಕೆಯ ಸೌತ್‌ಪೋರ್ಟ್ ಪಟ್ಟಣದ ಮಕ್ಕಳ ಕ್ಲಬ್‌ನಲ್ಲಿ “ಭಯಾನಕ” ಸಾಮೂಹಿಕ ಇರಿತದ ಘಟನೆಯಲ್ಲಿ ಆರರಿಂದ ಏಳು ಹುಡುಗಿಯರು ಸೇರಿದಂತೆ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ. ಸೌತ್‌ಪೋರ್ಟ್‌ನ ಹಾರ್ಟ್ ಸ್ಟ್ರೀಟ್‌ ಹೋಪ್ ಆಫ್ ಹಾರ್ಟ್ ಮಕ್ಕಳ ಕ್ಲಬ್‌ನಲ್ಲಿ ದಾಳಿ ನಡೆದಿದ್ದು, ಪೊಲೀಸರು ಚಾಕು ಹಿಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ನಾರ್ತ್ ವೆಸ್ಟ್ ಆಂಬ್ಯುಲೆನ್ಸ್ ಸೇವೆ ತನ್ನ ಸಿಬ್ಬಂದಿ ಇರಿತದ ಗಾಯಗಳಾಗಿದ್ದ 8 ಮಂದಿಗೆ ಚಿಕಿತ್ಸೆ ನೀಡಿದೆ. ಶಸ್ತ್ರಸಜ್ಜಿತ ಪೊಲೀಸರು ದಾಳಿ ನಡೆದ ಕಟ್ಟಡದಿಂದ ಒಬ್ಬ ವ್ಯಕ್ತಿಯನ್ನು ಹೊರಗೆ ಕರೆದೊಯ್ದಿದ್ದಾರೆ.

ಗಾಯಾಳುಗಳನ್ನು ಆಲ್ಡರ್ ಹೇ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡವರಲ್ಲಿ ಕೆಲವರನ್ನು ಐಂಟ್ರೀ ಯೂನಿವರ್ಸಿಟಿ ಆಸ್ಪತ್ರೆ ಮತ್ತು ಸೌತ್‌ಪೋರ್ಟ್ ಮತ್ತು ಫಾರ್ಮ್ಬಿ ಆಸ್ಪತ್ರೆಗೆ ಸಾಗಿಸಲಾಯಿತು.

ಸೌತ್‌ಪೋರ್ಟ್‌ನಲ್ಲಿ ನಡೆದ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಬಂಧಿಸಲಾದ 17 ವರ್ಷದ ಪುರುಷನು ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಸಲಾಗಿದೆ. ಘಟನೆ ಭಯೋತ್ಪಾದನೆಗೆ ಸಂಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯನ್ನು “ಭಯಾನಕ ಮತ್ತು ಆಳವಾದ ಆಘಾತಕಾರಿ ಸುದ್ದಿ” ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read