BREAKING: ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಗೆ ಬಿಗ್ ಶಾಕ್: ಯುಕೆ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಗೆಲುವಿನತ್ತ ಲೇಬರ್ ಪಾರ್ಟಿ

ಲಂಡನ್: ಯುನೈಟೆಡ್ ಕಿಂಗ್‌ಡಮ್‌(ಯುಕೆ) ಸಾರ್ವತ್ರಿಕ ಚುನಾವಣೆ ಮತೆಣಿಕೆ ನಡೆದಿದ್ದುಮ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ಪಾರ್ಟಿ ತೀವ್ರ ಹಿನ್ನಡೆಯಲ್ಲಿದೆ. ಲೇಬರ್‌ ಪಕ್ಷವು ಪ್ರಚಂಡ ಗೆಲುವು ಸಾಧಿಸುವತ್ತ ದಾಪುಗಾಲಿಟ್ಟಿದೆ.

ಜುಲೈ 4 ರಂದು ಹೌಸ್ ಆಫ್ ಕಾಮನ್ಸ್‌ನ 650 ಸದಸ್ಯರಿಗೆ ಐದು ವರ್ಷಗಳ ಅವಧಿಗೆ ಜನ ಮತ ಹಾಕಿದರು. ಪ್ರಧಾನ ಮಂತ್ರಿ ರಿಷಿ ಸುನಕ್ ನೇತೃತ್ವದ ಬಲಪಂಥೀಯ ಕನ್ಸರ್ವೇಟಿವ್‌ಗಳು ಮತ್ತು 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಎಡ-ಒಲವಿನ ಲೇಬರ್ ನಡುವಿನ ಸರ್ಕಾರದ ರಾಜಕೀಯ ದಿಕ್ಕನ್ನು ಫಲಿತಾಂಶಗಳು ನಿರ್ಧರಿಸುತ್ತವೆ.

ಮತ ಎಣಿಕೆಯಲ್ಲಿ ಲೇಬರ್ ಪಾರ್ಟಿ ಭಾರಿ ಮುನ್ನಡೆ ಗಳಿಸಿದ್ದುಮ 14 ವರ್ಷಗಳ ಕನ್ಸರ್ವೇಟಿವ್ ಆಳ್ವಿಕೆಯನ್ನು ಕೊನೆಗೊಳಿಸಿ ಮುಂಬರುವ ಚುನಾವಣೆಗಳನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲುವ ಹಾದಿಯಲ್ಲಿ ಮುನ್ನಡೆದಿದೆ.

ಲೇಬರ್ 410 ಸ್ಥಾನಗಳನ್ನು ಗೆಲ್ಲಬಹುದು, ಆರಾಮವಾಗಿ 326 ರ ಗಡಿಯನ್ನು ದಾಟಬಹುದು ಮತ್ತು ಪ್ರಸ್ತುತ ಕನ್ಸರ್ ವೇಟಿವ್ ಅಭ್ಯರ್ಥಿಗಳು ಕೇವಲ 131 ಸ್ಥಾನಗಳಿಗೆ 170 ಸ್ಥಾನಗಳ ಗಳಿಸಬಹುದು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read