ಜೈ ಹೋ ಹಾಡಿಗೆ ಬಿಂದಾಸ್ ಡಾನ್ಸ್ ಮಾಡಿದ ಬ್ರಿಟಿಷ್ ಪೊಲೀಸ್ ಅಧಿಕಾರಿ: ಸೊಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಭಾರತೀಯ ವಲಸಿಗರು ಈ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಚೇರಿಯ ಹೊರಗೆ ಜಮಾಯಿಸಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾವಿರಾರು ಸಂಖ್ಯೆಯ ಪೊಲೀಸರನ್ನ ನಿಯೋಜಿಸಲಾಗಿದೆ.

ಈ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಭಾರತೀಯ ಬೆಂಬಲಿಗರೊಂದಿಗೆ ಖುಷಿಯಾಗಿ ಕುಣಿದಿರುವ ವಿಡಿಯೋ ಈಗ ಸೊಶಿಯಲ್ ಮಿಡಿಯಾದಲ್ಲಿ ಹರಿದಾಡ್ತಿದೆ. ಬ್ರಿಟಿಷ್ ಪೋಲೀಸ್ ಡಾನ್ಸ್ ಮಾಡುವಾಗ ಹಿನ್ನಲೆಯಲ್ಲಿ ‘ಜೈ ಹೋ’ ಹಾಡು ಕೇಳಿಸುತ್ತದೆ ಈ ವಿಡಿಯೋ ಅಂತರ್ಜಾಲ ಲೋಕದಲ್ಲಿ ಸೆನ್ಸೆಷನ್ ಹುಟ್ಟು ಹಾಕಿದೆ.

ಮಾರ್ಚ್ 19 ರಂದು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಾಲಿಸ್ತಾನ್ ಪರ ಪ್ರತಿಭಟನಾಕಾರರು ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಸಿಖ್ ಸಮುದಾಯವು ಸೋಮವಾರ ಹೊಸದಿಲ್ಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿತು. ಪ್ರತಿಭಟನಾಕಾರರು ಬ್ರಿಟಿಷ್ ಹೈಕಮಿಷನ್ ಕಚೇರಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು.

ಇದೇ ಪ್ರತಿಭಟನಾ ಕಾರ್ಯಕ್ರಮದಲ್ಲಿ ಸಿಖ್ ಸಮುದಾಯದ ಸದಸ್ಯರು ಕೂಡ “ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು. ಆ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ.

ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿ ಬೆಂಬಲಿಗರ ಗು೦ವು ದಾಳಿ ಮಾಡಿ ಭಾರತದ ರಾಷ್ಟ್ರಧ್ವಜವನ್ನು ಕಿತ್ತೊಗೆದ ನಂತರ ಈ ಪ್ರತಿಭಟನೆಗೆ ಕಿಚ್ಚು ಹೊತ್ತಿಕೊಂಡ ಹಾಗಾಗಿದೆ. ಖಲಿಸ್ತಾನ್‌ನ ಹಳದಿ ಧ್ವಜವನ್ನು ಹೊತ್ತ ಇರುಷರು ಹೈಕಮಿಷನ್ ಕಟ್ಟಡವನ್ನು ಹತ್ತಿ ತ್ರಿವರ್ಣ ಧ್ವಜವನ್ನು ಕೆಳಗೆ ಎಳೆಯುವುದನ್ನು ವೀಡಿಯೊ ಭಾರತೀಯರನ್ನ ಕೆರಳುವಂತೆ ಮಾಡಿತು.

https://twitter.com/ANI/status/1638167112236630016?ref_src=twsrc%5Etfw%7Ctwcamp%5Etweetembed%7Ctwterm

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read