ನಟಿಯ ಲಗೇಜ್ ಸಮೇತ ಪರಾರಿಯಾದ ಉಬರ್ ಚಾಲಕ ಫುಲ್ ಟೈಟಾಗಿ ವಾಪಸ್

ನವದೆಹಲಿ: ದೆಹಲಿಯಲ್ಲಿ ಉಬರ್ ಚಾಲಕನೊಬ್ಬ ನನ್ನ ಲಗೇಜ್‌ನೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಟಿವಿ ನಟಿ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಉರ್ಫಿ ಜಾವೇದ್ ಮಂಗಳವಾರ ಆರೋಪಿಸಿದ್ದಾರೆ.

ಕರೆ ಮಾಡಿದರೂ ಚಾಲಕ ಹಿಂತಿರುಗಲು ನಿರಾಕರಿಸಿದ. ಆದರೆ, ಅವಳ ಪುರುಷ ಸ್ನೇಹಿತ ಮಧ್ಯಪ್ರವೇಶಿಸಿದಾಗ, ಚಾಲಕ ಹಿಂತಿರುಗಿದ್ದು, ಅವನು ಫುಲ್ ಟೈಟಾಗಿದ್ದ ಎಂದು ಹೇಳಲಾಗಿದೆ.

ದೆಹಲಿಯಲ್ಲಿ ಉಬರ್ ಜೊತೆ ನನಗೆ ಕೆಟ್ಟ ಅನುಭವ ಆಗಿದೆ. ಕ್ಯಾಬ್ ಬುಕ್ ಮಾಡಿದ್ದ ನಾನು ವಿಮಾನ ನಿಲ್ದಾಣಕ್ಕೆ ಹೋಗುವಾಗ ಊಟಕ್ಕೆ ನಿಲ್ಲಿಸಿದೆ, ಡ್ರೈವರ್ ನನ್ನ ಲಗೇಜ್ ನೊಂದಿಗೆ ಕಾರ್ ನಲ್ಲಿ ಕಣ್ಮರೆಯಾದ. ನನ್ನ ಪುರುಷ ಸ್ನೇಹಿತನ ಹಸ್ತಕ್ಷೇಪದ ನಂತರ ಚಾಲಕ 1 ಗಂಟೆಯ ನಂತರ ಮದ್ಯ ಸೇವಿಸಿದ್ದ ಚಾಲಕ ಹಿಂತಿರುಗಿದ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಉಬರ್ ಅನ್ನು ಹುಡುಗಿಯರಿಗೆ ಸುರಕ್ಷಿತವಾಗಿಸಬೇಕೆಂದು ಕಂಪನಿಯನ್ನು ಒತ್ತಾಯಿಸಿದ್ದಾರೆ. ಉಬರ್ ಇಂಡಿಯಾ ದಯವಿಟ್ಟು ನಮ್ಮ ಹುಡುಗಿಯರ ಸುರಕ್ಷತೆಗಾಗಿ ಏನಾದರೂ ಮಾಡಿ. ಇಂದು ಅತ್ಯಂತ ಕೆಟ್ಟ ಅನುಭವವಾಗಿದೆ. ಡ್ರೈವರ್ ನನ್ನ ಲಗೇಜ್ ಗಳೊಂದಿಗೆ ಕಣ್ಮರೆಯಾಗಿ ಎರಡು ಗಂಟೆಗಳ ನಂತರ ಹಿಂತಿರುಗಿದ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಆಕೆಯ ಟ್ವೀಟ್‌ಗೆ ಉಬರ್ ಇಂಡಿಯಾ ಸಪೋರ್ಟ್ ಪ್ರತಿಕ್ರಿಯಿಸಿದೆ. ನಿಮಗಾದ ತೊಂದರೆಗೆ ವಿಷಾದಿಸುತ್ತೇವೆ. ಈ ಬಗ್ಗೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದೆ.

https://twitter.com/uorfi_/status/1627982637578047488

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read