ವರುಣಾರ್ಭಟಕ್ಕೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಯುವಕರು: ಓರ್ವನ ಶವ ಪತ್ತೆ

ಗದಗ: ವರುಣಾರ್ಭಟಕ್ಕೆ ನದಿ, ಹಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟೆ ಬಳಿ ನಡೆದಿದೆ.

ಧಾರಾಕಾರ ಮಳೆಯಿಂದಾಗಿ ಹುಣಸಿಕಟ್ಟೆ ಬಳಿ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದು, ಹಳ್ಳದ ನೀರಿನಲ್ಲಿ ಯುವಕರಿಬ್ಬರು ಕೊಚ್ಚಿ ಹೋಗಿದ್ದಾರೆ. 25 ವರ್ಷದ ಶಿವಪ್ಪ ಅಶೋಕ್ ಹಾಗೂ 26 ವರ್ಷದ ಮಣಿಕಂಠ ಅಶೋಕ್ ನೀರುಪಾಲಾದ ಯುವಕರು.

ಶಿವಪ್ಪ ಅಶೋಕ್ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವ ಯುವಕ ಮಣಿಕಂಠನಿಗಾಗಿ ಹಳ್ಳದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

ಗದಗ ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮಣಿಕಂಠನ ಪತ್ನಿ ತವರಿಗೆ ಹೋಗಿದ್ದರು. ಧಾರಾಕಾರ ಮಳೆಯಿಂದಾಗಿ ಮನೆಗೆ ವಾಪಾಸ್ ಆಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪತ್ನಿ ಕರೆತರಲೆಂದು ಮಣಿಕಂಠ ಹಾಗೂ ಶಿವಪ್ಪ ಇಬ್ಬರೂ ಹೋಗಿದ್ದರು. ಹುಣಸಿಕಟ್ಟಿಯಿಂದ ನರಗುಂದಕ್ಕೆ ಬೈಕ್ ನಲ್ಲಿ ತೆರಳಿದ್ದರು. ಮಾರ್ಗಮಧ್ಯೆ ಹಳ್ಳ ತುಂಬಿಹರಿಯುತ್ತಿತ್ತು. ಆದರೂ ಹಳ್ಳ ದಾಟಲು ಮುಂದಾಗಿದ್ದಾರೆ. ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ. ಓರ್ವ ಶವವಾಗಿ ಪತ್ತೆಯಗೈದ್ದು, ಇನ್ನೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read