ಓರ್ವ ಹುಡುಗನಿಗಾಗಿ ಇಬ್ಬರು ಯುವತಿಯರ ಕಿತ್ತಾಟ: ಕ್ಲಾಸ್ ರೂಂ ನಲ್ಲೇ ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು

ನೊಯ್ದಾ: ತಂದೆ-ತಾಯಿ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗದಲ್ಲಿರಲಿ ಎಂದು ಕಷ್ಟಪಟ್ಟು ಶಾಲಾ-ಕಾಲೇಜಿಗೆ ಕಳುಹಿಸಿದರೆ ಕೆಲ ಮಕ್ಕಳು ಓದುವುದನ್ನು ಬಿಟ್ಟು ಬೇರೆಲ್ಲಾ ಕೆಲಸ ಮಾಡಿ ರಂಪ-ರಾದ್ಧಾಂತಗಳನ್ನೇ ಮೊಡಿಕೊಳ್ಳುತ್ತಾರೆ. ಇಲ್ಲೊಂದು ಘಟನೆಯಲ್ಲಿ ಓರ್ವ ಹುಡುಗನಿಗಾಗಿ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್ ರೂಂ ನಲ್ಲಿಯೇ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ನೊಯ್ಡಾದ ಎನ್ಐಇಟಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ಇಬ್ಬರು ಯುವತಿಯರು ಒಂದೇ ಹುಡುಗನನ್ನು ಪ್ರೀತಿಸುತ್ತಿದ್ದರು. ಇದೇ ಕಾರಣಕ್ಕೆ ಓರ್ವ ಯುವತಿ ಕ್ಲಾಸ್ ರೂಂ ನಲ್ಲೇ ತನ್ನ ಗುಂಪಿನೊಂದಿಗೆ ಇನ್ನೋರ್ವ ಯುವತಿಯ ಮೇಲೆ ದಾಳಿ ನಡೆಸಿದ್ದಾಳೆ. ತರಗತಿಯಲ್ಲಿಯೇ ವಿದ್ಯಾರ್ಥಿನಿಯರ ನಡುವೆ ಗಲಾಟೆ ಅರಂಭವಾಗಿದೆ. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಕೆಲ ವಿದ್ಯಾರ್ಥಿಗಳು ಇಬ್ಬರ ಜಡೆ ಜಗಳ ಬಿಡಿಸಲು ಯತ್ನಿಸಿದರೆ, ಇನ್ನು ಕೆಲವರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಕೆಲ ದಿನಗಳ ಹಿಂದಷ್ಟೇ ನೊಯ್ಡಾದ ಕಾಲೇಜ್ ಕ್ಯಾಂಟೀನ್ ಒಂದರಲ್ಲಿ ಇಬ್ಬರು ಯುವತಿಯರು ಕಿತ್ತಾಡಿಕೊಂಡಿದ್ದ ಘಟನೆ ನಡೆದಿತ್ತು. ಇದೀಗ ಕಾಲೇಜಿನ ಕ್ಲಾಸ್ ರೂಮಿನಲ್ಲಿಯೇ ವಿದ್ಯಾರ್ಥಿನಿಯರಿಬ್ಬರು ಹೊಡೆದಾಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read