ತರಬೇತಿ ಅಭ್ಯಾಸದ ವೇಳೆ ನದಿ ದಾಟುತ್ತಿದ್ದಾಗ ಹಗ್ಗ ತುಂಡಾಗಿ ಇಬ್ಬರು ಯೋಧರು ಹುತಾತ್ಮ

ಕೋಲ್ಕತ್ತಾ ಬಳಿಯ ಬ್ಯಾರಕ್‌ಪೋರ್‌ನಲ್ಲಿ ತರಬೇತಿಯ ವಾಡಿಕೆಯಂತೆ ನದಿ ದಾಟುವ ವ್ಯಾಯಾಮದ ವೇಳೆ ಹಗ್ಗ ತುಂಡಾಗಿ ಇಬ್ಬರು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ ಕೋಲ್ಕತ್ತಾದಿಂದ ಉತ್ತರಕ್ಕೆ 40 ಕಿಮೀ ದೂರದಲ್ಲಿರುವ ಬ್ಯಾರಕ್‌ಪೋರ್ ಕಂಟೋನ್ಮೆಂಟ್‌ನ ಸರೋವರ್ ಸರೋವರದಲ್ಲಿ ಈ ಘಟನೆ ನಡೆದಿದೆ.

ಈಸ್ಟರ್ನ್ ಕಮಾಂಡ್ ಅಧಿಕಾರಿಯೊಬ್ಬರ ಪ್ರಕಾರ, ಆರು ಸೈನಿಕರು ಬುಧವಾರ ನದಿ ದಾಟುವ ವ್ಯಾಯಾಮದಲ್ಲಿ ಭಾಗವಹಿಸಿದ್ದರು. ಮೊದಲ ಮೂವರು ಸುರಕ್ಷಿತವಾಗಿ ದಾಟಿದರು. ಉಳಿದವರು ನದಿ ದಾಟುತ್ತಿದ್ದಾಗ ಹಗ್ಗ ಇದ್ದಕ್ಕಿದ್ದಂತೆ ತುಂಡಾಯಿತು. ಈ ವೇಳೆ ಓರ್ವ ಸೈನಿಕನನ್ನು ರಕ್ಷಿಸಲು ಸಾಧ್ಯವಾದರೆ, ಇನ್ನಿಬ್ಬರು ನೀರಿನಲ್ಲಿ ಮುಳುಗಿದರು.

ಮೃತರಲ್ಲಿ ನಾಯಕ್ ಲೆಂಗ್‌ಖೋಲಾಲ್ ನಾಗಾಲ್ಯಾಂಡ್‌ನವರಾಗಿದ್ದರೆ, ಸಿಪಾಯಿ ಹ್ಮಿಂಗ್ತಾಂಜ್ವಾಲಾ ಮಿಜೋರಾಂಗೆ ಸೇರಿದವರು. ಇಬ್ಬರೂ ಅಸ್ಸಾಂ ರೆಜಿಮೆಂಟ್‌ಗೆ ಸೇರಿದವರು. ಶವಪರೀಕ್ಷೆ ಸೇರಿದಂತೆ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಅವರ ಪಾರ್ಥಿವ ಶರೀರವನ್ನು ಆಯಾ ಮನೆಗಳಿಗೆ ಹಿಂತಿರುಗಿಸಲಾಗುತ್ತಿದೆ. ಘಟನೆಯ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read