BIG NEWS: ಪ್ರಾಥಮಿಕ ಸಹಕಾರ ಸಂಘಗಳ ರೀತಿ ಮಾಧ್ಯಮಿಕ, ಫೆಡರಲ್, ಅಪೆಕ್ಸ್, ಸೌಹಾರ್ದ ಸಹಕಾರ ಸಂಘಗಳಲ್ಲಿಯೂ ಮೀಸಲಾತಿ

ಬೆಂಗಳೂರು: ಪ್ರಾಥಮಿಕ ಸಹಕಾರ ಸಂಘಗಳ ರೀತಿ ಮಾಧ್ಯಮಿಕ, ಫೆಡರಲ್, ಅಪೆಕ್ಸ್ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಗಳಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಎರಡು ಪ್ರತ್ಯೇಕ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಈ ಗುರಿದಂತೆ ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ 2024, ಕರ್ನಾಟಕ ಸಹಕಾರಿ(ತಿದ್ದುಪಡಿ)ವಿಧೇಯಕ 2024 ಅನ್ನು ಮಂಡಿಸಿದ್ದಾರೆ.

ಪ್ರಾಥಮಿಕ ಸಹಕಾರ, ಸೌಹಾರ್ದ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಲ್ಲಿನ ಮೀಸಲಾತಿಗೆ ಅನುಗುಣವಾಗಿ ಪ್ರಾತಿನಿಧ್ಯದ ಹೊಂದಿಲ್ಲದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು, ಕೃಷಿ ಪತ್ತಿನ ಸಂಘಗಳನ್ನು ಹೊರತುಪಡಿಸಿ ನೆರವು ಪಡೆದ ಸಹಕಾರ ಸಂಘಗಳಲ್ಲಿನ ನಾಮನಿರ್ದೇಶನ ಸ್ಥಾನ ಮೂರಕ್ಕೆ ಏರಿಸಿ ಒಂದು ಎಸ್ಸಿ/ಎಸ್ಟಿಗೆ, ಒಂದು ಸ್ಥಾನ ಮಹಿಳೆಯರಿಗೆ, ಒಂದು ಸ್ಥಾನ ಇತರೆ ಪ್ರವರ್ಗಕ್ಕೆ ಮೀಸಲಿಡಲು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read