‘ರಾಜ್ಯೋತ್ಸವ ಪ್ರಶಸ್ತಿ’ ಪಡೆದ ಉದ್ಯಮಿಗಳಿಂದಲೇ ಕನ್ನಡಿಗರ ಮೀಸಲಾತಿಗೆ ವಿರೋಧ : ನಟ ಚೇತನ್ ಅಹಿಂಸಾ ಕಿಡಿ

ಬೆಂಗಳೂರು : ರಾಜ್ಯೋತ್ಸವ ಪ್ರಶಸ್ತಿ ಪಡೆದ ಇಬ್ಬರು ಉದ್ಯಮಿಗಳು ಕನ್ನಡಿಗರ ಉದ್ಯೋಗ ಮೀಸಲಾತಿಯನ್ನು ವಿರೋಧಿಸಿದ್ದಾರೆ ಎಂದು ನಟ ಚೇತನ್ ಅಹಿಂಸಾ ಕಿಡಿಕಾರಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಚೇತನ್ ಅಹಿಂಸಾ ಮಿತಿಯಿಲ್ಲದ ಬಂಡವಾಳಶಾಹಿಗಳು ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಶಾ ಕರ್ನಾಟಕದ ಸ್ಥಳೀಯರಿಗೆ ಉದ್ಯೋಗಗಳಲ್ಲಿ ಮೀಸಲಾತಿಯನ್ನು ವಿರೋಧಿಸಿದ್ದಾರೆ. ವಿಪರ್ಯಾಸವೆಂದರೆ, ಈ ಇಬ್ಬರು ಎಲೀಟಿಸ್ಟ್ಗಳು 2002 ಮತ್ತು 2004ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ . ಪೈ ಮತ್ತು ಶಾ ಅವರಂತಹ ಸ್ವಾರ್ಥಿ, ಕರ್ನಾಟಕ ವಿರೋಧಿ ಜನರು ಕನ್ನಡಿಗರ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡುತ್ತಾರೆ ಮತ್ತು ಯಾವುದೇ ಪ್ರಶಸ್ತಿ ಅಥವಾ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಇಬ್ಬರು ಅರ್ಹರಲ್ಲ ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read