
ದೇವರಿಗೆ ಹಾಕಲೆಂದು ಇಬ್ಬರು ವ್ಯಕ್ತಿಗಳು 15 ದಿನಗಳ ಹಿಂದೆ ಪ್ಲಾಸ್ಟಿಕ್ ಕವರ್ ನಲ್ಲಿ ಹೂವಿನ ಹಾರ ತಂದಿದ್ದು, ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ಸಿಬ್ಬಂದಿ ತಡೆದಿದ್ದರು. ಈ ವೇಳೆ ಅದನ್ನು ಅವರ ಬಳಿಯೇ ನೀಡಿದ್ದು ಅದರಲ್ಲಿ ಮಾಂಸದ ತುಂಡು ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕನಸವಾಡಿ ಗ್ರಾಮದ ಶನಿ ಮಹಾತ್ಮ ದೇವಸ್ಥಾನಕ್ಕೆ ಈ ಕಿಡಿಗೇಡಿಗಳು ಪ್ಲಾಸ್ಟಿಕ್ ಕವರ್ ನಲ್ಲಿ ಹೂವಿನ ಹಾರ ತೆಗೆದುಕೊಂಡು ಬಂದಿದ್ದರೆಂದು ಹೇಳಲಾಗಿದೆ. ಆದರೆ ಪ್ಲಾಸ್ಟಿಕ್ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ ಎಂದು ಸಿಬ್ಬಂದಿ ಹೇಳಿದಾಗ ಸಿಬ್ಬಂದಿ ಬಳಿಯೇ ಈ ಪ್ಲಾಸ್ಟಿಕ್ ಕವರನ್ನು ಕೊಟ್ಟು ಕಿಡಿಗೇಡಿಗಳು ತೆರಳಿದ್ದರು.
ಸಿಬ್ಬಂದಿ ಪ್ಲಾಸ್ಟಿಕ್ ಕವರ್ ತೆಗೆಯಲು ಹೋದ ವೇಳೆ ಹಾರದಿಂದ ಮಾಂಸದ ತುಂಡು ಕೆಳಗೆ ಬಿದ್ದಿದೆ. ಕೂಡಲೇ ಆಡಳಿತ ಮಂಡಳಿಯವರು ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಪರಿಚಿತ ಯುವಕರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.

 
			 
		 
		 
		 
		 Loading ...
 Loading ... 
		 
		 
		