ಅಮೆರಿಕದ ಕಾನ್ಸಾಸ್ ನಗರದಲ್ಲಿ ಗುಂಡಿನ ದಾಳಿ: ಇಬ್ಬರು ಸಾವು, 22 ಮಂದಿಗೆ ಗಾಯ

ಅಮೆರಿಕದ ಕಾನ್ಸಾಸ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎಂಟು ಮಕ್ಕಳು ಸೇರಿದಂತೆ 22 ಜನರು ಗಾಯಗೊಂಡಿದ್ದಾರೆ.

ಸಿಟಿ ಚೀಫ್ಸ್ ಸೂಪರ್ ಬೌಲ್ ಎಂಬ ಕ್ರೀಡಾ ಕಾರ್ಯಕ್ರಮದ ಸಮಯದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕಾನ್ಸಾಸ್ ನಗರ ಪೊಲೀಸ್ ಮುಖ್ಯಸ್ಥ ಸ್ಟೇಸಿ ಗ್ರೇವ್ಸ್ ತಿಳಿಸಿದ್ದಾರೆ.

ಗುಂಡಿನ ದಾಳಿಯ ಹಿಂದಿನ ಉದ್ದೇಶವೇನು ಎಂದು ಪೊಲೀಸರು ಹೇಳಿಲ್ಲ. ಕಳೆದ ವರ್ಷ ಡೆನ್ವರ್ ನಗರದಲ್ಲಿ ನಡೆದ ಎಂಬಿಎ ಚಾಂಪಿಯನ್ ಶಿಪ್ ನಲ್ಲಿ ಶೂಟಿಂಗ್ ನಡೆದಿತ್ತು. ಅದರಲ್ಲಿಯೂ ಅನೇಕ ಜನರು ಗಾಯಗೊಂಡಿದ್ದಾರೆ. ಈ ಗುಂಡಿನ ದಾಳಿಯ ನಂತರ ಜನರು ಅಸಹಾಯಕರಾಗಿ ಪಲಾಯನ ಮಾಡುತ್ತಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ದಿನಗಳ ಹಿಂದೆ, ನ್ಯೂಯಾರ್ಕ್ನ ಸುರಂಗಮಾರ್ಗ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಗುಂಡಿನ ದಾಳಿ ನಡೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read