BREAKING: ಸಂಬಂಧಿಕರ ಅಂತ್ಯಕ್ರಿಯೆಗೆ ಕರೆಯದೆ ಹೋಗಿದ್ದಕ್ಕೆ 2 ಕುಟುಂಬಗಳ ಮಾರಾಮಾರಿ: ಓರ್ವನ ಕೊಲೆ

ರಾಯಚೂರು: ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ರಾಯಚೂರು ತಾಲೂಕಿನ ಮಿರ್ಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಭೀಮೇಶ್(40) ಹತ್ಯೆಯಾದವರು. ಹಲ್ಲೆಗೊಳಗಾಗಿ ಗಾಯಗೊಂಡ ಆರು ಜನರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಕರೆಯದೆ ಹೋಗಿದ್ದಕ್ಕೆ ಗಲಾಟೆ ನಡೆದಿದೆ.

ನಿನ್ನೆ ತಾಯಮ್ಮ ಎಂಬುವರ ಅಂತ್ಯಕ್ರಿಯೆಯಲ್ಲಿ ಕೊಲೆಯಾದ ಭೀಮೇಶ್ ಕುಟುಂಬದವರು ಭಾಗಿಯಾಗಿದ್ದರು. ಅಂತ್ಯಕ್ರಿಯೆ ನಂತರ ವಿರೋಧಿ ಬಣದವರು ಕಿರಿಕ್ ಮಾಡಿದ್ದಾರೆ. ನಮಗೆ ಹೇಳದೆ ಅಂತ್ಯಕ್ರಿಯೆಗೆ ಬಂದಿದ್ದೀರಿ ಎಂದು ಮನೆಗಳಿಗೆ ನುಗ್ಗಿ ಕೊಡಲಿ, ಚಾಕು, ಮಚ್ಚು, ಕಲ್ಲು, ಕಟ್ಟಿಗೆಯಿಂದ ಹಲ್ಲೆ ಮಾಡಲಾಗಿದ್ದು, ಭೀಮೇಶ್ ಮೃತಪಟ್ಟಿದ್ದಾರೆ.

ರಾಮಲಮ್ಮ, ಆಲಾದಿನಾಯಕ, ಧೂಳಯ್ಯ, ರಂಗಪ್ಪ, ತಳಾರಿ ಭೀಮಣ್ಣ, ಅಮರೇಶ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ವಿರೋಧಿ ಬಣದ ಧೂಳಯ್ಯ, ಕೃಷ್ಣ ಎಂಬುವರಿಗೂ ಗಾಯಗಳಾಗಿವೆ. ಹಲ್ಲೆಗೊಳಗಾದವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ರಾಯಚೂರು ಎಸ್.ಪಿ. ಪುಟ್ಟಮಾದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read