ಉಧಂಪುರ: ಉಧಂಪುರ: ಗುರುವಾರ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ವಾಹನ ಆಳವಾದ ಕಂದಕಕ್ಕೆ ಉರುಳಿದ್ದು, ಮೂವರು ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ವಾಹನವು ನೂರಾರು ಅಡಿಗಳಷ್ಟು ಕೆಳಗೆ ಉರುಳಿರುವುದರಿಂದ ಕೆಲವು ಸಾವುನೋವುಗಳು ಸಂಭವಿಸಿರಬಹುದು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, “ಕಾಂಡ್ವಾ-ಬಸಂತ್‌ಗಢ ಪ್ರದೇಶದಲ್ಲಿ ಸಿಆರ್‌ಪಿಎಫ್ ವಾಹನಕ್ಕೆ ಅಪಘಾತ ಸಂಭವಿಸಿದ ಸುದ್ದಿ ಕೇಳಿ ಬೇಸರವಾಯಿತು” ಎಂದು ಬರೆದಿದ್ದಾರೆ. “ವಾಹನವು ಸಿಆರ್‌ಪಿಎಫ್‌ನ ಹಲವಾರು ಧೈರ್ಯಶಾಲಿ ಜವಾನರನ್ನು ಹೊತ್ತೊಯ್ಯುತ್ತಿತ್ತು. ನಾನು ಇದೀಗ ಜಿಲ್ಲಾಧಿಕಾರಿ ಸಲೋನಿ ರೈ ಅವರೊಂದಿಗೆ ಮಾತನಾಡಿದ್ದೇನೆ, ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ನನಗೆ ಮಾಹಿತಿ ನೀಡುತ್ತಿದ್ದಾರೆ” ಎಂದು ಅವರು ಹೇಳಿದರು.
J&K | Two CRPF personnel died and 12 others were injured after a CRPF vehicle met with an accident near Kandva in the Basantgarh area of Jammu and Kashmir's Udhampur district. Police rushed to the spot and started a rescue operation, and shifted all injured persons to the nearby… https://t.co/uJhJpj9bsZ
— ANI (@ANI) August 7, 2025