ಬೆಂಗಳೂರು: ಆಟೋದಲ್ಲಿ ತೆರಳುತ್ತಿದ್ದ ಯುವತಿಯರನ್ನು ಚುಡಾಯಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ನಿವಾಸಿಗಳಾದ ಮುಬಾರಕ್ ಮತ್ತು ಹಾಫೀಜ್ ಬಂಧಿತರು ಎಂದು ಹೇಳಲಾಗಿದೆ.
ಬೈಕ್ ನಲ್ಲಿ ಬಂದು ಆಟೋವನ್ನು ಅಡ್ಡಗಟ್ಟಿದ ಇಬ್ಬರು ಕಿಡಿಗೇಡಿಗಳು ಯುವತಿಯರ ತಾಯಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಏಪ್ರಿಲ್ 23ರಂದು ಬೆಂಗಳೂರಿನ ಸಾರಕ್ಕಿ ಮಾರುಕಟ್ಟೆ ಬಳಿ ಆಟೋ ಅಡ್ಡಗಟ್ಟಿ ಚುಡಾಯಿಸಿದ ಬಗ್ಗೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ಯುವತಿಯರ ತಾಯಿ ದೂರು ನೀಡಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ಬಂಧಿಸಿದ್ದಾರೆ.