ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವುದಾಗಿ ಮನೆಯಲ್ಲಿ ಪಾಲಕರಿಗೆ ಕೇಳಿದಾಗ, ಯಾರೂ ಮೊದಲಿಗೆ ಸುಲಭದಲ್ಲಿ ಒಪ್ಪುವುದಿಲ್ಲ. ಬೇಡ ಎಂದು ಹೇಳಲು ಅವರ ಬಳಿಕ ನೂರಾರು ಕಾರಣಗಳು ಇರುತ್ತವೆ. ಒಂದು ವೇಳೆ ಓಕೆ ಎಂದರೂ ಪ್ರವಾಸಕ್ಕೆ ಒಪ್ಪಿಗೆ ನೀಡುವುದಾದರೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗುತ್ತದೆ. ಜೊತೆಗೆ ಟನ್ಗಟ್ಟಲೆ ಪ್ರಶ್ನೆಗಳನ್ನು ಹಾಕುತ್ತಾರೆ.
ಪಾಲಕರ ಈ ಸ್ವಭಾವವನ್ನೇ ಟ್ವಿಟರ್ ಬಳಕೆದಾರರೊಬ್ಬರು ಬಳಸಿಕೊಂಡಿದ್ದು, ನಿಮ್ಮ ಮನೆಯಲ್ಲಿನ ಕಥೆ ಏನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೂರಾರು ಬಳಕೆದಾರರು ಮೋಜು ಮಸ್ತಿಯ ಮಾಹಿತಿ ನೀಡಿದ್ದಾರೆ. ಕೆಲವರು ತಮ್ಮ ಕುತೂಹಲದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
‘ನನ್ನ ಅಪ್ಪ, ಮುಂದಿನ ಪರೀಕ್ಷೆಯಲ್ಲಿ 90ಕ್ಕಿಂತ ಮೇಲೆ ಅಂಕ ಪಡೆಯುವುದಾದರೆ ಓಕೆ’ ಎಂದರು ಎಂದು ಒಬ್ಬಾತ ಹೇಳಿದರೆ, ಇನ್ನೊಬ್ಬರು ‘ಫ್ರೆಂಡ್ಸ್ ಜೊತೆ ಬೇಡ, ಮುಂದಿನ ಸಲ ನಾವೇ ಫ್ಯಾಮಿಲಿಯವರು ಎಲ್ಲಿಯಾದರೂ ಹೋಗೋಣ’ ಎಂದು ಹೇಳಿರುವುದಾಗಿ ಬರೆದುಕೊಂಡಿದ್ದಾರೆ.
ಇನ್ನೊಬ್ಬ ‘ನಿನಗಾಗಿ ಶಿರಡಿಗೆ ಹೋಗುವ ಪ್ಲ್ಯಾನ್ ಮಾಡಿದ್ದೇವೆ, ಫ್ರೆಂಡ್ಸ್ ಜೊತೆ ಬೇಡ’ ಎಂದು ತಾಯಿ ಹೇಳಿದಳು ಎಂದು ಬರೆದುಕೊಂಡರೆ, ಮತ್ತೊಬ್ಬ ಬಳಕೆದಾರ, ‘ಮನೆ ಕೆಲಸವನ್ನು ಇನ್ನು ಮುಂದೆ ಸಂಪೂರ್ಣವಾಗಿ ಮಾಡುವುದಾದರೆ ನಾವು ಅನುಮತಿಸುತ್ತೇವೆ’ ಎಂದು ಅಮ್ಮ ಹೇಳಿರುವುದನ್ನು ಶೇರ್ ಮಾಡಿದ್ದಾರೆ. ಹೀಗೆ ಹಲವರು ತಮ್ಮ ವಿಶಿಷ್ಠವಾದ ಅನುಭವ ಶೇರ್ ಮಾಡಿಕೊಳ್ಳುತ್ತಿದ್ದಾರೆ.
https://twitter.com/dusky_drone/status/1634431977079332865?ref_src=twsrc%5Etfw%7Ctwcamp%5Etweetembed%7Ctwterm%5E1634431977079332865%7Ctwgr%5E9244efdc6b3124d1f8ca1723f5ca5730570594dd%7Ctwcon%5Es1_&ref_url=https%3A%2F%2Fwww.news18.com%2Fbuzz%2Ftwitter-thread-on-desi-parents-reply-when-asked-for-a-trip-has-some-hilarious-responses-7273525.html
https://twitter.com/LeftfootCurler/status/1634756926616776705?ref_src=twsrc%5Etfw%7Ctwcamp%5Etweetembed%7Ctwterm%5E1634756926616776705%7Ctwgr%5E9244efdc6b3124d1f8ca1723f5ca5730570594dd%7Ctwcon%5Es1_&ref_url=https%3A%2F%2Fwww.news18.com%2Fbuzz%2Ftwitter-thread-on-desi-parents-reply-when-asked-for-a-trip-has-some-hilarious-responses-7273525.html
https://twitter.com/UtdZarqq/status/1634558783346147329?ref_src=twsrc%5Etfw%7Ctwcamp%5Etweetembed%7Ctwterm%5E1634558783346147329%7Ctwgr%5E9244efdc6b3124d1f8ca1723f5ca5730570594dd%7Ctwcon%5Es1_&ref_url=https%3A%2F%2Fwww.news18.com%2Fbuzz%2Ftwitter-thread-on-desi-parents-reply-when-asked-for-a-trip-has-some-hilarious-responses-7273525.html