ಕಚೇರಿಗೆ ಟಾಯ್ಲೆಟ್​ ಪೇಪರ್​ ಖುದ್ದು ತರುತ್ತಿರುವ ಟ್ವಿಟರ್ ಉದ್ಯೋಗಿಗಳು…! ಇದರ ಹಿಂದಿದೆ ಈ ಕಾರಣ

ಉದ್ಯಮಿ ಎಲಾನ್​ ಮಸ್ಕ್​ ಟ್ವಿಟರ್​ ಸಂಸ್ಥೆಯನ್ನು ಸುಪರ್ದಿಗೆ ಪಡೆದ ನಂತರ ಬಹಳ ಕೋಲಾಹಲವೇ ಸೃಷ್ಟಿಯಾಗಿದೆ. ಟ್ವಿಟರ್​ನ ಅಸಂಖ್ಯ ಉದ್ಯೋಗಿಗಳನ್ನು ಮಸ್ಕ್​ ತೆಗೆದು ಭಾರಿ ವಿವಾದಕ್ಕೀಡಾಗಿರುವ ನಡುವೆಯೇ ಈತ ಮತ್ತೊಂದು ಸುದ್ದಿ ಹೊರಬಂದಿದೆ.

ಅದೇನೆಂದರೆ ಟ್ವಿಟರ್ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಸ್ವಂತ ಟಾಯ್ಲೆಟ್ ಪೇಪರ್ ತಂದು ಕಚೇರಿಯಲ್ಲಿ ಬಳಸುತ್ತಿದ್ದಾರೆ !

ಇದಕ್ಕೆ ಕಾರಣವೇನೆಂದರೆ, ಕೆಲಸ ಕಳೆದುಕೊಂಡ ಉದ್ಯೋಗಿಗಳಲ್ಲಿ ಹೌಸ್​ ಕೀಪಿಂಗ್​ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರೂ ಸೇರಿದ್ದಾರೆ. ಆದ್ದರಿಂದ ಟಾಯ್ಲೆಟ್ ಪೇಪರ್ ಖರೀದಿ ಮಾಡುತ್ತಿಲ್ಲ.

ಸಾಲದು ಎಂಬುದಕ್ಕೆ ಟಾಯ್ಲೆಟ್​ ಕ್ಲೀನ್​ ಮಾಡಲು ಕೆಲಸವರು ಇಲ್ಲದೇ ಅಲ್ಲಿ ವಾಸನೆ ಬರುತ್ತಿರುವುದರಿಂದ ಟಾಯ್ಲೆಟ್​ ಪೇಪರ್​ಗಳನ್ನು ಖುದ್ದು ತರುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್​ ಸಂಸ್ಥೆ ಭಾರಿ ಟ್ರೋಲ್​ಗೆ ಒಳಗಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read