ತುಮಕೂರು: ತುಮಕೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಪ್ಪಳದ ಸುರೇಶ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸೀನಿಯರ್ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಸುರೇಶ್ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಸಾವಿಗೂ ಮುನ್ನ ಮೃತ ಸುರೇಶ್ ಸ್ಟೇಟಸ್ ಹಾಕಿದ್ದು,. ಪೊಲೀಸರ ತನಿಖೆಯ ವೇಳೆ ಹೊಸ ಅನುಮಾನ ಮೂಡಿದೆ.
ತನ್ನದೇ ಕಾಲೇಜಿನ ಸೀನಿಯರ್ ಯುವತಿ ಮೇಲಿನ ಒನ್ ಸೈಡ್ ಲವ್ ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೆಳೆಯರ ವಿಚಾರಣೆಯ ವೇಳೆ ಮೇಲ್ನೋಟಕ್ಕೆ ಈ ವಿಚಾರ ಕಂಡು ಬಂದಿದೆ. ಸಾವಿಗೂ ಮುನ್ನ ಸ್ಟೇಟಸ್ ನಲ್ಲಿ ‘ಗುಡ್ ಬಾಯ್ ಮೈ ಡಿಯರ್ ಲೈಫ್, ಆರ್.ಐ.ಪಿ.’ ಎಂದು ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾನೆ. ಸ್ಟೇಟಸ್ ನಲ್ಲಿ ಸಾವಿನ ಸುದ್ದಿ ತಿಳಿಸಿದ್ದಾನೆ. ಅಕ್ಟೋಬರ್ 26ರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ವಿದ್ಯಾರ್ಥಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಂಟಿಯಾಗಿ ನೆಲೆಸಿದ್ದ ಸುರೇಶ್ ಸಾವಿನ ಹಿಂದೆ ಹಲವು ಅನುಮಾನ ವ್ಯಕ್ತವಾಗಿದೆ. ತುಮಕೂರಿನ ಖಾಸಗಿ ಕಾಲೇಜಿನಲ್ಲಿ ಸುರೇಶ್ ನರ್ಸಿಂಗ್ ಓದುತ್ತಿದ್ದ. ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಆತ ಜಯನಗರದ ಸರಸ್ವತಿಪುರಂನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲವು ತಿಂಗಳಿಂದ ಜೊತೆಗಿದ್ದ ಗೆಳೆಯ ಇತ್ತೀಚೆಗೆ ಪ್ರತ್ಯೇಕವಾಗಿದ್ದ. ನಂತರ ಒಂಟಿಯಾಗಿ ಸುರೇಶ್ ವಾಸವಾಗಿದ್ದು, ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಂದೆ ದೂರು ನೀಡಿದ್ದಾರೆ.
