ಐದು ಜನರ ಅಸ್ಥಿಪಂಜರ ಪ್ರಕರಣಕ್ಕೆ ಹೊಸ ತಿರುವು: ಎರಡು ಅಸ್ಥಿಪಂಜರಗಳ ಮೇಲೆ ಹಗ್ಗ ಕಟ್ಟಿದ ಗುರುತು ಪತ್ತೆ…?

ಚಿತ್ರದುರ್ಗ: ನಗರದ ಮನೆಯೊಂದರಲ್ಲಿ ಐದು ಜನರ ಅಸ್ಥಿಪಂಜರ ಸಿಕ್ಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಎರಡು ಅಸ್ತಿಪಂಜರಗಳ ಮೇಲೆ ಹಗ್ಗ ಕಟ್ಟಿದಂತೆ ಗುರುತು ಪತ್ತೆಯಾಗಿದೆ. ಆರಂಭದಲ್ಲಿ ಕುಟುಂಬದ ಐದು ಜನ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಡೆತ್ ನೋಟ್ ಸಿಕ್ಕಿದ್ದು, ಇಬ್ಬರು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದರು ಎನ್ನುವ ಮಾಹಿತಿ ಬಂದಿತ್ತು.

ಶನಿವಾರ ಮರಣೋತ್ತರ ಪರೀಕ್ಷೆ ಬಳಿಕ ಎರಡು ಅಸ್ಥಿಪಂಜರಗಳ ಮೇಲೆ ಹಗ್ಗ ಕಟ್ಟಿದಂತೆ ಗುರುತು ಪತ್ತೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ಗಂಡು, ಮತ್ತೊಂದು ಹೆಣ್ಣಿನ ಅಸ್ಥಿಪಂಜರದ ಮೇಲೆ ಹಗ್ಗದಿಂದ ಬಿಗಿದಂತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಹಲವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.

ಎಫ್.ಎಸ್.ಎಲ್. ತಜ್ಞರ ತಂಡ, ಪೊಲೀಸರ ತನಿಖಾ ತಂಡಗಳಿಂದ ಪದೇಪದೇ ಪರಿಶೀಲನೆ ನಡೆಸಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಎಫ್.ಎಸ್.ಎಲ್., ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ. ಶನಿವಾರ ಸಂಜೆ ದೊಡ್ಡಸಿದ್ದವ್ವನಹಳ್ಳಿ ನಾಡಿಗ ಕುಟುಂಬದವರು 5 ಜನರ ಅಸ್ಥಿಪಂಜರಗಳಿಗೆ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read