Viral Video | ಹಮಾಸ್ ಉಗ್ರರ ದಾಳಿ; ಖಾಸಗಿ ವಾಹಿನಿ ವರದಿಗಾರ್ತಿಯಿಂದ ಪ್ಯಾರಾಗ್ಲೈಡಿಂಗ್ ಮೂಲಕ ‘ಪ್ರಾತ್ಯಕ್ಷಿಕೆ’

article-image

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ನಡುವಿನ ಸಂಘರ್ಷವನ್ನ ತೋರಿಸುತ್ತಿರುವ ಮಾಧ್ಯಮಗಳ ಪೈಕಿ ಖಾಸಗಿ ವಾಹಿನಿಯೊಂದು ವಿಭಿನ್ನವಾಗಿ ಹಮಾಸ್ ಉಗ್ರರ ಕ್ರೌರ್ಯವನ್ನ ತೋರಿಸಿದೆ.

ಹಮಾಸ್ ಗುಂಪು ಪ್ಯಾರಾಗ್ಲೈಡರ್‌ಗಳ ಮೂಲಕ ಇಸ್ರೇಲ್ ಮೇಲೆ ಹೇಗೆ ದಾಳಿ ನಡೆಸಿತು ಎಂಬುದನ್ನು ನಿಕಟವಾಗಿ ಮರುಸೃಷ್ಟಿಸಿ ವೀಕ್ಷಕರ ಗಮನ ಸೆಳೆದಿದೆ. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ದೃಶ್ಯಗಳನ್ನು ಜನರಿಗೆ ತೋರಿಸಲು ಟಿವಿ ವರದಿಗಾರ್ತಿ ಹರಿಯಾಣದ ಮಾನೇಸರ್‌ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿ ಸಾಹಸ ಮೆರೆದಿದ್ದಾರೆ.

ತನ್ನ ಸುದ್ದಿ ವರದಿಯಲ್ಲಿ ಮೌಸಮಿ ಸಿಂಗ್ ಎಂದು ಗುರುತಿಸಲಾದ ವರದಿಗಾರ್ತಿ ಇಸ್ರೇಲ್ ನೆಲದಲ್ಲಿ ನಡೆದ ಯುದ್ಧದಲ್ಲಿ ಹಮಾಸ್ ದಾಳಿಯನ್ನು ವಿವರಿಸಲು ಪ್ಯಾರಾಗ್ಲೈಡರ್ ಬಳಸಿದರು.

ಹಮಾಸ್ ಭಯೋತ್ಪಾದಕರು ಇತ್ತೀಚೆಗೆ ಮೋಟಾರು ಪ್ಯಾರಾಗ್ಲೈಡರ್‌ಗಳನ್ನು ಬಳಸಿ ರೇವ್ ಪಾರ್ಟಿ ಮಾಡ್ತಿದ್ದವರ ಮೇಲೆ ದಾಳಿ ಮಾಡಿ ಅನೇಕರನ್ನು ಹತ್ಯೆ ಮಾಡಿದ್ದರು ಮತ್ತು ಕೆಲವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.

ದಾಳಿಗೆ ಪ್ಯಾರಾ ಗ್ಲೈಡಿಂಗ್ ಹೇಗೆ ಸೂಕ್ತವಾಗಿತ್ತು? ಹಮಾಸ್ ಭಯೋತ್ಪಾದಕರು ಇಸ್ರೇಲ್‌ಗೆ ಪ್ರವೇಶಿಸಲು ಮತ್ತು ತಮ್ಮ ದಾಳಿಯನ್ನು ತೀವ್ರಗೊಳಿಸಲು ಈ ಸಾರಿಗೆಯನ್ನು ಏಕೆ ಆಶ್ರಯಿಸಿರಬಹುದು ಎಂದು ತಿಳಿಸಲು ತಜ್ಞರಿಂದ ಹೆಚ್ಚಿನ ಮಾಹಿತಿ ವಿವರಿಸುವ ನ್ಯೂಸ್ ವಾಹಿನಿಯ ಈ ವಿಡಿಯೋ ವೈರಲ್ ಆಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read