ಪೇನ್ ಕಿಲ್ಲರ್ ಆಗಿ ಪರಿಣಾಮಕಾರಿ ಅರಿಶಿಣ

ಅರಿಶಿಣ….ದಕ್ಷಿಣ ಭಾರತದ ಅಡುಗೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಸುವ ಪದಾರ್ಥ. ಬಣ್ಣಕ್ಕಾಗಿ, ರುಚಿಗಾಗಿ ಬಳಸುವ ಹಳದಿ, ಔಷಧೀಯ ಗುಣಗಳ ಆಗರವೂ ಹೌದು.

ಉರಿಯೂತ ಹಾಗೂ ಗಾಯಗಳನ್ನು ಬಹುಬೇಗ ಗುಣಪಡಿಸುವ ಈ ಅರಿಶಿಣ, ಸಂಧಿವಾತ, ಹೃದಯ ರೋಗ, ಬುದ್ಧಿ ಮಾಂದ್ಯತೆ ಮತ್ತು ಕೆಲ ಬಗೆಯ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ.

ಮತ್ತೊಂದು ಮುಖ್ಯವಾದ ಔಷಧೀಯ ಗುಣವೆಂದರೆ ಇದು ಪೇನ್ ಕಿಲ್ಲರ್ ಆಗಿಯೂ ಕೆಲಸ ಮಾಡುತ್ತದೆ. ಹೌದು, ‘ದ ಯೂರೋಪಿಯನ್ ರಿವ್ಯೂ ಫಾರ್ ಮೆಡಿಕಲ್ ಅಂಡ್ ಫಾರ್ಮಾಕೊಲಾಜಿಕಲ್ ಸೈನ್ಸಸ್’ ಜರ್ನಲ್ ನಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ಪ್ರಕಾರ, ಕ್ರೀಡಾ ಗಾಯಗಳನ್ನು ಉಪಶಮನಗೊಳಿಸುವ ಪ್ರಸಿದ್ಧ ನೋವು ನಿವಾರಕಗಳಿಗಿಂತ ಅರಿಶಿಣ ಮತ್ತಷ್ಟು ಪರಿಣಾಮಕಾರಿಯಾಗಿದೆ. ಇದರಿಂದ ಗಾಯ ಬೇಗನೇ ಒಣಗುವುದಲ್ಲದೇ, ಯಾವುದೇ ಅಡ್ಡ ಪರಿಣಾಮವೂ ಇಲ್ಲ ಅನ್ನೋದು ಸಾಬೀತಾಗಿದ್ದಾಗಿ ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read