BREAKING NEWS: ಟರ್ಕಿಯಲ್ಲಿ ಘೋರ ದುರಂತ: ಹೋಟೆಲ್ ಗೆ ಭಾರೀ ಬೆಂಕಿ ತಗುಲಿ 66 ಜನ ಸಾವು | VIDEO

ಅಂಕಾರ(ಟರ್ಕಿ): ವಾಯುವ್ಯ ಟರ್ಕಿಯೆಯಲ್ಲಿರುವ ಸ್ಕೀ ರೆಸಾರ್ಟ್‌ನ ಹೋಟೆಲ್‌ನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 66 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 32 ಜನರು ಗಾಯಗೊಂಡಿದ್ದಾರೆ. ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಜಾವ 3:30 ರ ಸುಮಾರಿಗೆ ಹೋಟೆಲ್ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಬೆಂಕಿ ಆವರಿಸಿದಾಗ ಗಾಬರಿಗೊಂಡು ಕಟ್ಟಡದಿಂದ ಹಾರಿದ ಇಬ್ಬರು ಸಾವನ್ನಪ್ಪಿದ್ದಾರೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು ಎಂದು ರಾಜ್ಯಪಾಲ ಅಬ್ದುಲಜೀಜ್ ಐದಿನ್ ತಿಳಿಸಿದ್ದಾರೆ.

ಹೋಟೆಲ್‌ನಲ್ಲಿ ಸ್ಕೀ ಬೋಧಕ ನೆಕ್ಮಿ ಕೆಪ್ಸೆಟುಟನ್, ಬೆಂಕಿ ಹೊತ್ತಿಕೊಂಡಾಗ ತಾನು ನಿದ್ರಿಸುತ್ತಿದ್ದೆ. ಬೆಂಕಿ ಕಂಡು ಕಟ್ಟಡದಿಂದ ಹೊರಗೆ ಧಾವಿಸಿದೆ. ನಂತರ ಸುಮಾರು 20 ಅತಿಥಿಗಳನ್ನು ಹೋಟೆಲ್‌ನಿಂದ ಹೊರಗೆ ತರಲು ಸಹಾಯ ಮಾಡಿದೆ. ಹೋಟೆಲ್ ಹೊಗೆಯಿಂದ ಆವೃತವಾಗಿತ್ತು, ಅತಿಥಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳುವ ಸ್ಥಳವನ್ನು ಪತ್ತೆಹಚ್ಚಲು ಕಷ್ಟವಾಯಿತು ಎಂದು ತಿಳಿಸಿದ್ದಾರೆ.

161 ಕೋಣೆಗಳ ಹೋಟೆಲ್ ಬಂಡೆಯ ಬದಿಯಲ್ಲಿದೆ, ಇದು ಬೆಂಕಿಯನ್ನು ನಂದಿಸುವ ಪ್ರಯತ್ನಗಳಿಗೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ.

ಕಾರ್ತಲ್ಕಯಾ ಇಸ್ತಾನ್‌ಬುಲ್‌ನಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಕೊರೊಗ್ಲು ಪರ್ವತಗಳಲ್ಲಿರುವ ಜನಪ್ರಿಯ ಸ್ಕೀ ರೆಸಾರ್ಟ್ ಆಗಿದೆ. ಘಟನಾ ಸ್ಥಳಕ್ಕೆ 30 ಅಗ್ನಿಶಾಮಕ ವಾಹನಗಳು ಮತ್ತು 28 ಆಂಬ್ಯುಲೆನ್ಸ್‌ ಗಳನ್ನು ಕಳುಹಿಸಲಾಗಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read