ಕ್ಯಾನ್ಸರ್ ಎಂದು ಕರೆಯಲ್ಪಡುವ ಮಾರಣಾಂತಿಕ ಕಾಯಿಲೆಯೊಂದಿಗೆ ಜನರು ಹೇಗೆ ಹೋರಾಡುತ್ತಾರೆ ಎಂಬುದನ್ನು ತೋರಿಸುವ ವೀಡಿಯೊಗಳಿಂದ ಇಂಟರ್ನೆಟ್ ತುಂಬಿದೆ. ಅವರಲ್ಲಿ ಕೆಲವರು ತಮ್ಮ ದೈನಂದಿನ ಹೋರಾಟದ ಕಥೆಗಳನ್ನು ಹೇಳಿಕೊಂಡಿದ್ದರೆ, ಇತರರು ತಮ್ಮ ಸುತ್ತಲಿನ ಜನರು ಕಾಯಿಲೆಯೊಂದಿಗೆ ಹೋರಾಡುವ ಕಥೆಗಳನ್ನು ಹಂಚಿಕೊಂಡಿದ್ದಾರೆ.
ಇದರ ಕುರಿತು ಟರ್ಕಿಯ ಆಸ್ಪತ್ರೆಯೊಂದರಲ್ಲಿ ಚಿತ್ರೀಕರಿಸಿದ ಈ ವೀಡಿಯೊ ನಿಮಗೆ ಕಣ್ಣೀರು ತರಿಸುತ್ತದೆ. ಕ್ಯಾನ್ಸರ್ ರೋಗಕ್ಕೆ ತುತ್ತಾದ ಮಕ್ಕಳು ಚಿಕಿತ್ಸಾ ಕೋಣೆಯಲ್ಲಿ ಬಲೂನ್‌ಗಳೊಂದಿಗೆ, ಎಲೆಕ್ಟ್ರಿಕ್ ಆಟಿಕೆ ಕಾರುಗಳೊಂದಿಗೆ ಆಡುವುದನ್ನು ನೋಡಬಹುದು.
ಟರ್ಕಿಶ್ ಆಸ್ಪತ್ರೆಯು ಮಕ್ಕಳಿಗೆ ಕ್ಯಾನ್ಸರ್ ಚಿಕಿತ್ಸೆ ನೀಡುವ ಪೂರ್ವದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ನೀಡಲಾಗುತ್ತದೆ. ಟರ್ಕಿಯ ನಗರವಾದ ಕೈಸೇರಿಯಲ್ಲಿರುವ ಆಸ್ಪತ್ರೆಯಲ್ಲಿ, ಕ್ಯಾನ್ಸರ್ ಹೊಂದಿರುವ ಮಕ್ಕಳಿಗೆ ಚಿಕಿತ್ಸಾ ಕೋಣೆಗೆ ಹೋಗಲು ಸ್ಟ್ರೆಚರ್‌ನ ಬದಲಿಗೆ ಮಿನಿ ಬ್ಯಾಟರಿ ಚಾಲಿತ ಕಾರುಗಳನ್ನು ನೀಡಲಾಗುತ್ತದೆ. ಕಾಂಕಾ ಅಸೋಸಿಯೇಶನ್‌ನ ಮುಖ್ಯಸ್ಥ ಮತ್ತು ಎರ್ಸಿಯಸ್ ಆಸ್ಪತ್ರೆಯ ಪೀಡಿಯಾಟ್ರಿಕ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಮೂಸಾ ಕಾರಕುರ್ಕು ಅನಾಡೋಲು ಮಾತನಾಡಿ, ಕ್ಯಾನ್ಸರ್ ಮತ್ತು ಮೂಳೆ ಮಜ್ಜೆಯ ಕಸಿ ಅಗತ್ಯವಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮಲ್ಲಿ ಆರು ರೈಡ್-ಆನ್ ಕಾರುಗಳಿವೆ. ಕೆಲವೊಮ್ಮೆ ನಾವು ಮಕ್ಕಳನ್ನು ಆಸ್ಪತ್ರೆಯಲ್ಲಿದ್ದಾಗ ಟೊಮೊಗ್ರಫಿ ಮತ್ತು MRI ಸ್ಕ್ಯಾನ್‌ಗೆ ಕಳುಹಿಸುತ್ತೇವೆ. ಅವರು ಈ ಕಾರುಗಳಲ್ಲಿ ಹೋಗುತ್ತಾರೆ. ಆದ್ದರಿಂದ ಅವರು ಹೆಚ್ಚು ಸಂತೋಷವಾಗಿರುತ್ತಾರೆ ಎಂದು ಡಾ. ಮೂಸಾ ಕಾರಕುರ್ಕು ಅನಾಡೋಲು ತಿಳಿಸಿದರು.
https://twitter.com/anadoluagency/status/1620759351597334533?ref_src=twsrc%5Etfw%7Ctwcamp%5Etweetembed%7Ctwterm%5E1620759351597334533%7Ctwgr%5Ec0153215c8a036b0177ed3b3f63860978844abaa%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fturkish-hospital-uses-toy-cars-to-take-kids-with-cancer-for-treatment-watch-heartwarming-video-2329743-2023-02-02