ಭೂಕಂಪಕ್ಕೆ ಬಲಿಯಾದ ಟರ್ಕಿ ಫುಟ್ ಬಾಲ್ ತಂಡದ ಆಟಗಾರ

ಟರ್ಕಿಯ ಫುಟ್ ಬಾಲ್ ತಂಡದ ಗೋಲ್‌ ಕೀಪರ್ ಭೂಕಂಪಕ್ಕೆ ಬಲಿಯಾಗಿದ್ದಾರೆ. ಟರ್ಕಿ ಮತ್ತು ಸಿರಿಯಾವನ್ನು ಭೂಕಂಪ ಧ್ವಂಸಗೊಳಿಸಿದ ನಂತರ ಉರ್ಕಿಶ್ ಫುಟ್ಬಾಲ್ ಆಟಗಾರ ಐಯುಪ್ ಟರ್ಕಸ್ಲಾನ್ ದುರಂತವಾಗಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.

ಕೇವಲ 28 ವರ್ಷ ವಯಸ್ಸಿನ ಗೋಲ್‌ಕೀಪರ್ ಸೋಮವಾರ ಬೆಳಿಗ್ಗೆ ಸಂಭವಿಸಿದ ನೈಸರ್ಗಿಕ ವಿಕೋಪದ ನಂತರ ಅವಶೇಷಗಳಡಿಯಲ್ಲಿ ಸಮಾಧಿಯಾದ ಸಾವಿರಾರು ಜನರಲ್ಲಿ ಒಬ್ಬರಾಗಿದ್ದಾರೆ. ಮಂಗಳವಾರ ಮುಂಜಾನೆ ಭೂಕಂಪದ ನಂತರ ಮತ್ತಷ್ಟು ಕಂಪನಗಳಿಂದ ಸಾವಿನ ಸಂಖ್ಯೆ ಭಾರಿ ಏರಿಕೆ ಕಂಡಿದೆ.

ಫುಟ್ಬಾಲ್ ಆಟಗಾರನ ಹೆಂಡತಿಯನ್ನು ಅವಶೇಷಗಳಿಂದ ರಕ್ಷಿಸಲಾಗಿದೆ. ಆದರೆ ಮಂಗಳವಾರ ಮಧ್ಯಾಹ್ನ ಟರ್ಕಸ್ಲಾನ್ ಬಗ್ಗೆ ಹೃದಯ ವಿದ್ರಾವಕ ಅಪ್ಡೇಟ್ ನೀಡಿದ್ದು, ಯೆನಿ ಮಲತ್ಯಸ್ಪೋರ್ ಟ್ವಿಟರ್‌ನಲ್ಲಿ ನಮ್ಮ ಗೋಲ್‌ಕೀಪರ್ ಅಹ್ಮತ್ ಐಯುಪ್ ಟರ್ಕಸ್ಲಾನ್ ಭೂಕಂಪದ ಕುಸಿತದ ನಂತರ ತನ್ನ ಪ್ರಾಣವನ್ನು ಕಳೆದುಕೊಂಡರು. ನಾವು ನಿಮ್ಮನ್ನು ಮರೆಯುವುದಿಲ್ಲ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read