ತುಮಕೂರು: ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 80 ಅಡಿಕೆ ಸಸಿಗಳನ್ನು ಕಡಿದು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದಲ್ಲಿ ನಡೆದಿದೆ.
ತಿರುಮಲ್ಲಯ್ಯ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 80 ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕಿದ್ದಾರೆ. ತಿರುಮಲ್ಲಯ್ಯನವರಿಗೆ ಆಗದವರ್ಯಾರೋ ರಾತ್ರಿ ಬೆಳಗಾಗುವಷ್ಟರಲ್ಲಿ ತೋಟಕ್ಕೆ ನುಗ್ಗಿ ಈ ಕೃತ್ಯವೆಸಗಿದ್ದಾರೆ.
ಈ ಹಿಂದೆ ತಿರುಮಲಯ್ಯ ಬೆಳೆದಿದ್ದ ಮೆಡಿಸಿನಲ್ ಸೌತೆಕಾಯಿ ಬೆಳೆಯನ್ನು ಇದೇ ರೀತಿ ದುಷ್ಕರ್ಮಿಗಳು ನಾಶಮಾಡಿದ್ದರಂತೆ. ಈಗ ಅಡಿಕೆ ಗಿಡಗಳ ಮಾರಣ ಹೋಮ ಮಾಡಿ, ಸಂಪೂರ್ಣ ನಾಶಪಡಿಸಿದ್ದಾರೆ.