BIG UPDATE: ವಿಡಿಯೋ ಮಾಡಿಟ್ಟು ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ; ಐವರು ಆರೋಪಿಗಳು ಅರೆಸ್ಟ್

ತುಮಕೂರು: ಮೂವರು ಮಕ್ಕಳನ್ನು ಕೊಂದು ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ನಗರದಲ್ಲಿ ನಿನ್ನೆ ಗರೀಬ್ ಸಾಬ್ ಹಾಗೂ ಸಮಯ್ಯಾ ದಂಪತಿ ತಮ್ಮ ಮೂವರು ಮಕ್ಕಳಾದ ಹಜೀರಾ, ಮೊಹಮ್ಮದ್ ಶಬ್ಬೀರ್, ಮೊಹಮ್ಮದ್ ಮುನೀರ್ ಅವರನ್ನು ಕತ್ತು ಹಿಸುಕಿ ಕೊಲೆಗೈದು ಬಳಿಕ ನೇಣಿಗೆ ಶರಣಾಗಿದ್ದರು. ಸಾವಿಗೂ ಮುನ್ನ ಬರೆದಿಟ್ಟಿರುವ ಎರಡು ಪುಟಗಳ ಡೆತ್ ನೋಟ್ ಹಾಗೂ 5 ನಿಮಿಷಗಳ ವಿಡಿಯೋ ಪತ್ತೆಯಾಗಿದೆ.

ವಿಡಿಯೋದಲ್ಲಿ ಗರಿಬ್ ಸಾಬ್ ಐವರ ಹೆಸರನ್ನು ಉಲ್ಲೇಖಿಸಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಪಡೆದುಕೊಂಡಿದ್ದರು. ಅದಕ್ಕೆ ವಾರಕ್ಕೆ ಇಂತಿಷ್ಟು ಎಂದು ಬಡ್ಡಿ ಕಟ್ಟಬೇಕಿತ್ತು. ತಡವಾದರೆ ಕಿರುಕುಳ ನೀಡುತ್ತಿದ್ದರು. ಮೃತರು ವಾಸವಾಗಿದ್ದ ಬಾಡಿಗೆ ಮನೆಯಯ ಕೆಳಗೆ ಇದ್ದ ಖಲಂದರ್ ಹಾಗೂ ಆತನ ಕುಟುಂಬದವರು ಹಿಂಸೆ, ಕಿರುಕುಳ ನೀಡುತ್ತಿರುವುದಾಗಿ ಹೇಳಿದ್ದಾರೆ. ಖಲಂದರ್ ಸೇರಿದಂತೆ ಐವರು ಹೆಸರನ್ನು ವಿಡಿಯೋದಲ್ಲಿ ಹೇಳಿದ್ದು, ತಿಲಕ್ ಪಾರ್ಕ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಖಲಂದರ್, ಖಲಂದರ್ ಮಗಳು ಸಾನಿಯಾ, ಖಲಂದರ್ ಮಗ ಹಾಗೂ ಇನ್ನೋರ್ವ ಮಹಿಳೆ ಶಬಾನಾ ಸೇರಿ ಐವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read