BIG NEWS: ಮೃತ ವ್ಯಕ್ತಿ ಹೆಸರಲ್ಲಿ ಅಂಗವಿಕಲ ದೃಢೀಕರಣ ಪತ್ರ ವಿತರಣೆ; ಇಬ್ಬರು ವೈದ್ಯರು ಸಸ್ಪೆಂಡ್

ತುಮಕೂರು: ಮೃತ ವ್ಯಕ್ತಿಯ ಹೆಸರಲ್ಲಿ ಅಂಗವಿಕಲ, ವಯಸ್ಸಿನ ದೃಢೀಕರಣ ಪತ್ರ ವಿತರಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ತುಮಕೂರು ಜಿಲ್ಲೆಯ ಮದುಗಿರಿ ಆಸ್ಪತ್ರೆಯ ವೈದ್ಯರಾದ ಡಾ.ಮಹೇಶ್ ಸಿಂಗ್, ಡಾ.ಪುರುಷೋತ್ತಮ ಸಸ್ಪೆಂಡ್ ಆದವರು. ಘಟನೆ ಸಂಬಂಧ ಆರೋಗ್ಯ ಇಲಾಖೆಯ ಆರ್ ಟಿಐ ಕಾರ್ಯಕರ್ತರು ದೂರು ನೀಡಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೈದ್ಯರಿಬ್ಬರನ್ನು ಅಮಾನತು ಮಾಡಲಾಗಿದೆ.

2022ರಲ್ಲಿ ಮೃತಪಟ್ಟಿದ್ದ ಹನುಮಂತರಾಯಪ್ಪ ಎಂಬುವವರ ಹೆಸರಲ್ಲಿ ಅಂಗವಿಕಲ ಹಾಗೂ ವಯಸ್ಸಿನ ಪ್ರಮಾಣ ಪತ್ರ ದೃಢೀಕರಣ ಪತ್ರವನ್ನು ವೈದ್ಯರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಚಂದ್ರಕಾಂತ್ ವೈದ್ಯರಿಬ್ಬರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read