ಭಾರತದ ಫುಟ್ಬಾಲ್ ದಿಗ್ಗಜ ತುಳಸಿದಾಸ್ ಬಲರಾಮ್ ಇನ್ನಿಲ್ಲ

1962 ರ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಭಾರತ ಫುಟ್ಬಾಲ್ ತಂಡದ ಸದಸ್ಯರಾಗಿದ್ದ ತುಳಸಿದಾಸ್ ಬಲರಾಮ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 87 ವರ್ಷದ ತುಳಸಿ ದಾಸ್ ಬಲರಾಮ್ ಆಸ್ಪತ್ರೆಯಲ್ಲಿಯೇ ವಿಧಿವಶರಾಗಿದ್ದಾರೆ.

ವೃತ್ತಿ ಬದುಕಿನಿಂದ ನಿವೃತ್ತರಾದ ಬಳಿಕ ಕೊಲ್ಕತ್ತಾದ ‘ಮೇಯರ್ ಟೀಮ್’ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಅವರು ಪಶ್ಚಿಮ ಬಂಗಾಳದಲ್ಲಿಯೇ ನೆಲೆಸಿದ್ದರು. ಕಳೆದ ವರ್ಷದ ಡಿಸೆಂಬರ್ 26ರಂದು ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗುರುವಾರ ಮಧ್ಯಾಹ್ನ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರು ಆಸ್ಪತ್ರೆಗೆ ಸೇರಿಕೊಂಡ ಬಳಿಕ ಅದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದ್ದು ಇದಕ್ಕಾಗಿ ಕುಟುಂಬ ಸದಸ್ಯರು ಕ್ರೀಡಾ ಸಚಿವ ಅರುಪ್ ಬಿಸ್ವಾಸ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

1936 ಅಕ್ಟೋಬರ್ 4ರಂದು ತಮಿಳುನಾಡು ಮೂಲದವರಾದ ಮುತ್ತಮ್ಮ ಹಾಗೂ ತುಳಸಿದಾಸ್ ಕಾಳಿದಾಸ ದಂಪತಿಗಳಿಗೆ ಸಿಕಂದರಾಬಾದಿನ ಅಮ್ಮುಗೂಡ ಗ್ರಾಮದಲ್ಲಿ ಜನಿಸಿದ ತುಳಸಿದಾಸ್ ಬಲರಾಮ್ ತಮ್ಮ ಫುಟ್ಬಾಲ್ ಬದುಕಿನಲ್ಲಿ 131 ಗೋಲ್ ಗಳನ್ನು ಗಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read