ಅನಾನಸ್ ಮೆಣಸ್ಕಾಯ್ ರುಚಿ ನೋಡಿ

ಬೇಕಾಗುವ ಸಾಮಾಗ್ರಿಗಳು: ಅನಾನಸು – 1, ಕಪ್ಪು ಎಳ್ಳು – 5 ಟೀ ಸ್ಪೂನ್, ಕಡಲೇಬೇಳೆ- 3 ಟೀ ಸ್ಪೂನ್, ಮೆಣಸು – 6, ಉದ್ದಿನ ಬೇಳೆ – 2 ಟೀ ಸ್ಪೂನ್, ಅರಶಿನ ಪುಡಿ ½ ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಬೆಲ್ಲ.

ಮಾಡುವ ವಿಧಾನ: ಸ್ವಲ್ಪ ಹಣ್ಣಾದ ಅನಾನಸು ತೆಗೆದುಕೊಂಡು ಸಿಪ್ಪೆ ತೆಗೆದುಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ಹೋಳುಗಳಾಗಿ ಕಟ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ನೀರು ಹಾಕಿ ಬೇಯಲು ಇಡಿ. ಬಳಿಕ ಕಪ್ಪು ಎಳ್ಳನ್ನು ಹುರಿದು ಬೇರೆ ಪಾತ್ರೆಗೆ ವರ್ಗಾಯಿಸಿ.

ಕಡಲೇಬೇಳೆ, ಉದ್ದಿನ ಬೇಳೆ, ಖಾರಕ್ಕೆ ತಕ್ಕಷ್ಟು ಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ಪೈನಾಪಲ್ ಬೇಯುತ್ತಾ ಬರುವಾಗ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಬೇಕು. ಅರಶಿನ ಪುಡಿ 1/2ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಲು ಬಿಡಿ.

ಇನ್ನು ಹುರಿದಿಟ್ಟ ಮಸಾಲೆಯನ್ನು ನುಣ್ಣಗೆ ರುಬ್ಬಬೇಕು. ಬಳಿಕ ಬೆಂದ ಅನಾನಸಿಗೆ ರುಬ್ಬಿರುವಂತಹ ಮಸಾಲೆ ಮಿಶ್ರಣ ಹಾಕಿ. ಚೆನ್ನಾಗಿ ಕುದಿ ಬಂದಾಗ ಒಗ್ಗರಣೆ ಹಾಕಿದರೆ ಬಿಸಿಬಿಸಿ ಅನ್ನದ ಜೊತೆ ರುಚಿಯಾದ ಅನಾನಸು ಮೆಣಸಿನಕಾಯಿ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read