ಸ್ನಾನದ ನೀರಿಗೆ ಹಾಲು ಬೆರೆಸಿ ಸ್ನಾನ ಮಾಡಿನೋಡಿ

ಪ್ರತಿ ದಿನ ಸ್ನಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಸ್ನಾನ, ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ, ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾಜರು ಮತ್ತು ರಾಣಿಯರು ಹಾಲಿನಿಂದ ಸ್ನಾನ ಮಾಡ್ತಿದ್ದರಂತೆ. ಅವರಂತೆ ನೀವು ಕೂಡ ಹಾಲಿನ ಸ್ನಾನ ಮಾಡಬಹುದು. ಹಾಲಿನ ಸ್ನಾನದಿಂದ ಸಾಕಷ್ಟು ಪ್ರಯೋಜನವಿದೆ.

ಸ್ನಾನದ ನೀರಿನಲ್ಲಿ ಒಂದು ಬಟ್ಟಲು ಹಾಲು ಅಥವಾ ಹಾಲಿನ ಪುಡಿಯನ್ನು ಮಿಶ್ರಣ ಮಾಡಿ. ಇದಕ್ಕಾಗಿ ಹಸುವಿನ ಹಾಲು ಮಾತ್ರವಲ್ಲ, ತೆಂಗಿನ ಹಾಲು, ಮೇಕೆ ಹಾಲು, ಸೋಯಾ ಹಾಲುಗಳನ್ನು ಕೂಡ ಬಳಸಬಹುದು. ಹಾಲಿನಲ್ಲಿ ಪ್ರೋಟೀನ್, ಕೊಬ್ಬು ಜೀವಸತ್ವಗಳು, ಖನಿಜಗಳು ಮತ್ತು ಲ್ಯಾಕ್ಟಿಕ್ ಆಮ್ಲವಿರುತ್ತದೆ. ಇದು ಒಣ ಚರ್ಮವನ್ನು ತೇವಗೊಳಿಸುತ್ತದೆ.

ಅಧ್ಯಯನವೊಂದರ ಪ್ರಕಾರ, ಹಾಲಿನ ಸ್ನಾನವು, ಚರ್ಮದ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಸ್ನಾನದ ನೀರಿಗೆ ಹಾಲು ಸೇರಿಸುವುದರಿಂದ ಸೋರಿಯಾಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು. ತುರಿಕೆ, ಚರ್ಮದ ದದ್ದುಗಳು ಈ ರೋಗದ ಲಕ್ಷಣವಾಗಿದೆ. ತುರಿಕೆ, ಕೆಂಪು ದುದ್ದು ಅಥವಾ ಊತದ ಸಮಸ್ಯೆಯಿದ್ದರೆ ಹಾಲಿನ ಸ್ನಾನ ಮಾಡಬೇಕು. ಹಾಲಿನಲ್ಲಿರುವ ವಿಟಮಿನ್ ಎ, ವಿಟಮಿನ್ ಡಿ, ಪ್ರೋಟೀನ್, ಕೊಬ್ಬು, ಅಮೈನೋ ಆಮ್ಲಗಳು ಬಿಸಿಲಿನಿಂದ  ಕಪ್ಪಾಗುವ ಚರ್ಮಕ್ಕೆ ರಕ್ಷಣೆ ನೀಡುತ್ತದೆ.

ಸೂಕ್ಷ್ಮ ಚರ್ಮದ, ಜ್ವರ ಇರುವವರು ಮತ್ತು ಗರ್ಭಿಣಿಯರು ಹಾಲಿನ ಸ್ನಾನ ಮಾಡಬಾರದು. ಹಾಲಿನ ಸ್ನಾನಕ್ಕೆ ಮೊದಲು ಇವರು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸ್ನಾನ ಮಾಡುವಾಗ ತಲೆ ಸುತ್ತಿದಂತಾದ್ರೆ ಸ್ನಾನವನ್ನು ನಿಲ್ಲಿಸಿ. ಹಾಗೆ ಈ ನೀರನ್ನು ಎಂದಿಗೂ ಸೇವನೆ ಮಾಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read