ಷೇರು ಬೆಲೆ ಭಾರೀ ಕುಸಿತದ ನಡುವೆ ಉದ್ಯಮಿ ಮಸ್ಕ್ ಗೆ ಬೆಂಬಲವಾಗಿ ಕೆಂಪು ಟೆಸ್ಲಾ ಕಾರ್ ಖರೀದಿಸಿದ ಟ್ರಂಪ್ | VIDEO

ವಾಷಿಂಗ್ಟನ್: ಉದ್ಯಮಿ ಎಲಾನ್ ಮಸ್ಕ್ ಗೆ ಬೆಂಬಲ ಸೂಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಟೆಸ್ಲಾ ಕಾರ್ ಖರೀದಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಸರ್ಕಾರಿ ನೌಕರರನ್ನು ಕಡಿತಗೊಳಿಸುವಲ್ಲಿ ಎಲಾನ್ ಮಸ್ಕ್ ಅವರ ಪಾತ್ರ ವಿರೋಧಿಸಿ ಅಮೆರಿಕದಾದ್ಯಂತ ಟೆಸ್ಲಾ ಕಂಪನಿ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಟೆಸ್ಲಾ ಕಂಪನಿ ವಿರುದ್ಧ ಷೇರುಪೇಟೆಯಲ್ಲಿ ಅಸಮಾಧಾನದ ಪರಿಣಾಮ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಇದರ ನಡುವೆಯೇ ಮಸ್ಕ್ ಗೆ ಬೆಂಬಲ ಸೂಚಿಸಿ ಕೆಂಪು ಬಣ್ಣದ ಹೊಸ ಕಾರ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖರೀದಿಸಿದ್ದಾರೆ.

ಎಲಾನ್ ಮಸ್ಕ್ ದೇಶಕ್ಕಾಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಆದರೆ ಟೆಸ್ಲಾ ಬಹಿಷ್ಕರಿಸುವ ಸಲುವಾಗಿ ಎಡಪಂಥೀಯರು ಮಸ್ಕ್ ಮೇಲೆ ದಾಳಿ ಮಾಡುತ್ತಿದ್ದಾರೆ. ಮಸ್ಕ್ ಅವರಿಗೆ ಬೆಂಬಲ ನೀಡುವ ಸಲುವಾಗಿ ನಾನು ಹೊಸ ಟೆಸ್ಲಾ ಕಾರ್ ಅನ್ನು ಖರೀದಿಸಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಉದ್ಯಮಿ ಎಲಾನ್ ಮಸ್ಕ್ ಅಮೆರಿಕ ಸರ್ಕಾರದ ಕಾರ್ಯದರ್ಶಿತ ಇಲಾಖೆಯ ಉಸ್ತುವಾರಿಯಾಗಿದ್ದಾರೆ. ಅವರಿಗೆ ಬೆಂಬಲ ಸೂಚಕವಾಗಿ ಡೊನಾಲ್ಡ್ ಟ್ರಂಪ್ ಮಂಗಳವಾರ ಶ್ವೇತಭವನದ ಡ್ರೈವ್‌ ವೇಯಲ್ಲಿ ಹೊಳೆಯುವ ಕೆಂಪು ಟೆಸ್ಲಾವನ್ನು ಖರೀದಿಸಿದರು. ಇದು ಎಲೋನ್ ಮಸ್ಕ್ ಅವರ ಎಲೆಕ್ಟ್ರಿಕ್ ವಾಹನ ಕಂಪನಿಗೆ ಬೆಂಬಲವನ್ನು ಸೂಚಿಸುತ್ತದೆ. ಅಧ್ಯಕ್ಷರಿಗಾಗಿ ಮಸ್ಕ್ ಶ್ವೇತಭವನದ ಸೌತ್ ಲಾನ್‌ನ ಮುಂದೆ ಕೆಲವು ಟೆಸ್ಲಾಗಳನ್ನು ಸಾಲಾಗಿ ನಿಲ್ಲಿಸಿದ ನಂತರ ಟ್ರಂಪ್ ಕಾರನ್ನು ಆಯ್ಕೆ ಮಾಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read