ಸಾಹಸಿ, ಧೈರ್ಯವಂತ ಹುಡುಗಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಅರೆ ಕ್ಷಣದಲ್ಲಿ ಆಕೆ ಮಾಡಿದ ಕೆಲಸದಿಂದ ದೊಡ್ಡ ಅನಾಹುತ ತಪ್ಪಿದೆ. ಟ್ರಕ್ ಚಾಲಕನೊಬ್ಬ ಹ್ಯಾಂಡ್ ಬ್ರೇಕ್ ಹಾಕದೆ ವಾಹನವನ್ನು ನಿಲ್ಲಿಸಿ, ಸರಕುಗಳನ್ನು ಆಫ್ ಲೋಡ್ ಮಾಡ್ತಿದ್ದ. ಈ ವೇಳೆ ಟ್ರಕ್ ಚಲಿಸಲು ಶುರುವಾಗಿದೆ. ಅಲ್ಲಿದ್ದ ಯುವತಿಯೊಬ್ಬಳು ತಕ್ಷಣ ಜಂಪ್ ಮಾಡಿ ಟ್ರಕ್ ಹತ್ತಿದ್ದಲ್ಲದೆ ಟ್ರಕ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾಳೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಸರಕುಗಳನ್ನು ಇಳಿಸುವ ಟ್ರಕ್‌ನ ಪಕ್ಕ ಹುಡುಗಿಯೊಬ್ಬಳು ಓಡಾಡ್ತಿದ್ದಾಳೆ. ಈ ಸಮಯದಲ್ಲಿ ಟ್ರಕ್ ಮುಂದಕ್ಕೆ ಚಲಿಸಲು ಶುರುವಾಗುತ್ತದೆ. ಆಫ್‌ಲೋಡಿಂಗ್ ಮಾಡುತ್ತಿರುವ ವ್ಯಕ್ತಿಗಳು ಹಿಂದಿನಿಂದ ಟ್ರಕ್ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಧೈರ್ಯವಂತ ಹುಡುಗಿ ಟ್ರಕ್ ಏರಿ ಹ್ಯಾಂಡ್‌ಬ್ರೇಕ್ ಹಾಕ್ತಾಳೆ. ಲಾರಿ ರಸ್ತೆ ಅರ್ಧಕ್ಕೆ ಹೋಗಿ ನಿಲ್ಲುತ್ತದೆ.
ಕೇವಲ 14 ಸೆಕೆಂಡಿನ ಈ ಕ್ಲಿಪ್ ಎಕ್ಸ್ ಖಾತೆಯಲ್ಲಿ ವೈರಲ್ ಆಗಿದೆ. ಬಳಕೆದಾರರು ಹುಡುಗಿ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಎಲ್ಲಿ ವಾಹನ ಪಾರ್ಕ್ ಮಾಡುವಾಗ್ಲೂ ಹ್ಯಾಂಡ್ ಬ್ರೇಕ್ ಹಾಕಿ ಎಂದು ಸಲಹೆ ನೀಡಿದ್ದಾರೆ.
https://twitter.com/gharkekalesh/status/1820319713429434500?ref_src=twsrc%5Etfw%7Ctwcamp%5Etweetembed%7Ctwterm%5E1820319713429434500%7Ctwgr%5E0a4869dba9e249c8b5f7c961f2191322c52c9180%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideodaringdriverlesstruckstartsrollingdownthestreetgirljumpsontothevehicletoapplybrakewatch-newsid-n625213198