ಚೆನ್ನೈ: ಖ್ಯಾತ ನಟಿ ತ್ರಿಷಾ ಕೃಷ್ಣನ್ ಮನೆಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ.
ನಟಿ ತ್ರಿಷಾ ಹಾಗೂ ಹಲವು ರಾಜಕೀಯ ನಾಯಕರ ಮನೆಗಳಿಗೂ ಬಾಂಬ್ ಬೆದರಿಕೆ ಕರೆ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಗಳಿಗೆ ತೆಅಳಿ ಬಾಂಬ್ ನಿಷ್ಖ್ರಿಯ ದಳ, ಶ್ವಾನ ದಳದಿಂದಪರಿಶೀಲನೆ ನಡೆಸಲಾಗಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ನಟಿ ತ್ರಿಷಾ ಅವರ ತೇನಮ್ ಪೇಟ್ ನಿವಾಸ, ಬಿಜೆಪಿ ಮುಖ್ಯ ಕಚೇರಿ, ನಟ, ರಾಜಕಾರಣಿ ಎಸ್ ವಿ.ಶೇಖರ್ ಮನೆಗಳಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಸಿಎಂ ಎಂ.ಕೆ ಸ್ಟಾಲಿನ್, ರಾಜ್ಯಪಾಲರ ನಿವಾಸಕ್ಕೂ ಬಾಂಬ್ ಇಡಲಾಗಿದೆ ಎಂದು ಪೊಲೀಸರುಗೆ ಕರೆಯೊಂದು ಬಂದಿತ್ತು. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಬಳಿಕ ಇದೊಂದು ಹುಸಿ ಕರೆ ಎಂಬುದು ದೃಢವಾಗಿದೆ ಎಂದು ತಿಳಿಸಿದ್ದಾರೆ.