Trending News : ‘ಸಿಂಗಲ್’ ಎಂಬ ಚಿಂತೆ ನಿಮ್ಮನ್ನು ಕಾಡ್ತಿದ್ಯಾ..? : ಗ್ರೀನ್ ರಿಂಗ್ ಧರಿಸಿ ‘ಮಿಂಗಲ್’ ಆಗಿ

ದುನಿಯಾ ಸ್ಪೆಷಲ್ ಡೆಸ್ಕ್ : ನೀವು ಇನ್ನೂ ಸಿಂಗಲ್ ಆಗಿದ್ದೀರಾ..? ಅಥವಾ ನಿಮಗೆ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ಬೇಕು ಎಂದು ಅನಿಸಿದ್ಯಾ..? ಸಿಂಗಲ್ ಆಗಿರುವ ನೀವು ಮಿಂಗಲ್ ಆಗಬೇಕೆಂದು ಆಸೆ ಪಡುತ್ತಿದ್ದೀರಾ..ಹಾಗಾದರೆ ಪಿಯರ್ ರಿಂಗ್ ಧರಿಸಿ. ಹೌದು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ‘ಪಿಯರ್ ರಿಂಗ್’ ಟ್ರೆಂಡ್ ಸಖತ್ ಸದ್ದು ಮಾಡುತ್ತಿದೆ.

ಇತ್ತೀಚೆಗೆ ಯುವಕರು, ಯುವತಿಯರು ಹಸಿರು ಉಂಗುರಗಳನ್ನು ಧರಿಸುತ್ತಿರುವುದು ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ. ಆದರೆ ಕೆಲವರಿಗೆ ಯಾಕೆ ಹಸಿರು ಉಂಗುರ ಧರಿಸುತ್ತಾರೆ ಎಂಬುದು ಗೊತ್ತಿಲ್ಲ.

ಹೌದು, ನೀವು ಅವಿವಾಹಿತರಾಗಿದ್ದರೆ ( ಸಿಂಗಲ್) ಮತ್ತು ಗೆಳೆಯ, ಗೆಳತಿಯರನ್ನು ಹುಡುಕುತ್ತಿದ್ದರೆ ನೀವು ಈ ಹಸಿರು ಉಂಗುರವನ್ನು ಧರಿಸಬಹುದು. ಪರ್ಯಾಯ ಡೇಟಿಂಗ್ ಅಪ್ಲಿಕೇಶನ್ ಆಗಿ ಲಕ್ಷಾಂತರ ಅವಿವಾಹಿತರು ಈಗ ಹಸಿರು ಉಂಗುರಗಳನ್ನು ಧರಿಸುತ್ತಿರುವ ಇತ್ತೀಚಿನ ಟ್ರೆಂಡ್ ಆಗಿದೆ. ಹಸಿರು ಬಣ್ಣ ಸಿಂಗಲ್ ಎಂಬ ಸಂಕೇತ ಸೂಚಿಸುತ್ತದೆ ಕೂಡ ಎನ್ನಲಾಗಿದೆ.

ಪಿಯರ್ ರಿಂಗ್ ಬ್ರಾಂಡ್ ವೆಬ್ ಸೈಟ್ ಪ್ರಕಾರ, “ವಿಶ್ವದಾದ್ಯಂತ 1.2 ಬಿಲಿಯನ್ ಅವಿವಾಹಿತರು ತಾವು ಅವಿವಾಹಿತರು ಎಂದು ತೋರಿಸಲು ತಮ್ಮ ಬೆರಳಿಗೆ ಸಣ್ಣ ಹಸಿರು ಉಂಗುರವನ್ನು ಧರಿಸಿದ್ದು, ನಮಗೆ ಡೇಟಿಂಗ್ ಅಪ್ಲಿಕೇಶನ್ ಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ನೀವು ಈ ರಿಂಗ್ ಖರೀದಿಸಿದರೆ ಈ ಬ್ರ್ಯಾಂಡ್ ನಡೆಸುವ ಪಿಯರ್ ಫೆಸ್ಟ್ನಿಂದ ಆಹ್ವಾನ ಸಿಗಲಿದೆ ಎಂದು ಈ ಪಿಯರ್ ರಿಂಗ್ ತಯಾರಿಕಾ ಕಂಪನಿ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read