ನಂಬಲಸಾಧ್ಯವಾದರೂ ಇದು ಸತ್ಯ: ನೀರಿಗೆ ಬಿದ್ದ ಶ್ವಾನದ ಜೀವ ಉಳಿಸಿದ ಮೊಸಳೆಗಳು !

ಶ್ವಾನಗಳ ದಾಳಿಯಿಂದ ತನ್ನನ್ನು ತಾನು ಕಾಪಾಡಿಕೊಳ್ಳಲು ಸಾವಿತ್ರಿ ನದಿಗೆ ನಾಯಿಯೊಂದು ಹಾರಿದ ಘಟನೆಯು ಮಹಾರಾಷ್ಟ್ರದ ಮಹಾಡ್​ನಲ್ಲಿ ಸಂಭವಿಸಿದೆ.

ಹತ್ತಿರದಲ್ಲೇ ಮೂರು ಮೊಸಳೆಗಳು ಇವೆ ಎಂಬುದರ ಸಣ್ಣ ಅರಿವು ಇಲ್ಲದ ನಾಯಿಯು ಬೇರೆ ನಾಯಿಗಳ ಆಕ್ರಮಣದಿಂದ ಕಾಪಾಡಿಕೊಳ್ಳಲು ನದಿಗೆ ಜಿಗಿದಿದೆ. ಆಶ್ಚರ್ಯ ಎಂದ್ರೆ ಮೊಸಳೆಗಳು ನಾಯಿಯ ಮೇಲೆ ಯಾವುದೇ ರೀತಿಯ ದಾಳಿಯನ್ನು ಮಾಡಿಲ್ಲ.

ಅದರ ಬದಲಾಗಿ ಈ ನಾಯಿಯನ್ನು ರಕ್ಷಿಸಲು ಮೊಸಳೆಗಳು ಸಹಾಯ ಮಾಡಿವೆ. ಮೊಸಳೆಗಳೇ ನಾಯಿಯನ್ನು ದಡದತ್ತ ತಳ್ಳಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.

ಲೇಖಕರಾಗಿರುವ, ಉತ್ಕರ್ಷ್​ ಚವ್ಹಾಣ್​ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಹುಶಃ ಈ ನಾಯಿಯು ತನ್ನ ಪ್ರದೇಶವನ್ನು ಬಿಟ್ಟು ಬೇರೆ ಕಡೆ ಬಂದಂತಿದೆ. ಇದಾದ ಬಳಿಕ ಬೇರೆ ಶ್ವಾನಗಳ ದಾಳಿಯಿಂದ ಪಾರಾಗಲು ಈ ನಾಯಿಯು ಆಳವಿಲ್ಲದ ಸಾವಿತ್ರಿ ನದಿಗೆ ಜಿಗಿದಿದೆ. ಅಲ್ಲೇ ಇದ್ದ ಮೂರು ಮೊಸಳೆಗಳು ಶ್ವಾನದ ಬಳಿಗೆ ಬಂದಿವೆ.

ಇನ್ನೇನು ಆ ಮೊಸಳೆಗಳು ಶ್ವಾನದ ಮೇಲೆ ದಾಳಿ ಮಾಡುತ್ತವೆ ಎಂದುಕೊಳ್ಳುವಷ್ಟರಲ್ಲಿ ಮೊಸಳೆಗಳು ಶ್ವಾನದ ಸಹಾಯಕ್ಕೆ ನಿಂತಿವೆ ಎಂದು ಅವರು ಹೇಳಿದ್ರು.

ಮೊಸಳೆಗಳು ತಮ್ಮ ಮೂತಿಯ ಸಹಾಯದಿಂದ ಶ್ವಾನವನ್ನು ದಡದತ್ತ ದೂಡಿವೆ. ಸುರಕ್ಷಿತವಾಗಿ ಶ್ವಾನವನ್ನು ಮೊಸಳೆಗಳು ದಡಕ್ಕೆ ತಲುಪಿಸಿವೆ. ಇದನ್ನು ನೋಡಿದ ನೆಟ್ಟಿಗರು ಮೊಸಳೆಗಳು ಹಸಿದಿರಲಿಲ್ಲ ಎಂದು ಕಾಣುತ್ತೆ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.

https://twitter.com/BigImpactHumans/status/1705285386635825387

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read