Viral Video | ಅರೆಬೆತ್ತಲಾಗಿ ವಿಮಾನ ಏರಲು ಬಂದ ಮಹಿಳೆ; ಬೆಚ್ಚಿಬಿದ್ದ ಸಹ ಪ್ರಯಾಣಿಕರು ಶಾಕ್‌

ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ವಿಮಾನ ಹತ್ತಲು ಅರೆಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಫ್ಲೋರಿಡಾದಿಂದ ಹೊರಡುವ ತಮ್ಮ ವಿಮಾನಕ್ಕಾಗಿ ಸಾಲಿನಲ್ಲಿ ಕಾಯುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಸೊಂಟದಿಂದ ಕೆಳಗೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಇತರ ಪ್ರಯಾಣಿಕರು
ದಿಗ್ಭ್ರಮೆಗೊಂಡರು.

ವೈರಲ್ ವೀಡಿಯೋದಲ್ಲಿ ಫೋರ್ಟ್ ಲಾಡರ್‌ಡೇಲ್-ಹಾಲಿವುಡ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿರುವ ಸ್ಪಿರಿಟ್ ಏರ್‌ಲೈನ್ಸ್ ಕೌಂಟರ್‌ನಲ್ಲಿ ಸರದಿಯಲ್ಲಿ ನಿಂತಿದ್ದ ಮಹಿಳೆಯೊಬ್ಬರು ಕಿತ್ತಳೆ ಬಣ್ಣದ ಹಾಲ್ಟರ್-ನೆಕ್ ಉಡುಪನ್ನಷ್ಟೇ ಧರಿಸಿದ್ದರು. ಸೊಂಟದಿಂದ ಕೆಳಗಿನ ಭಾಗದಲ್ಲಿ ಬೆತ್ತಲೆಯಾಗಿದ್ದು ಇದನ್ನು ನೋಡಿದ ಇತರೆ ಪ್ರಯಾಣಿಕರು ತುಂಬಾ ಅಚ್ಚರಿಪಟ್ಟಿದ್ದರು.

ತನ್ನ ಸೂಟ್ ಕೇಸ್ ಹಿಡಿದು ಸಾಲಿನಲ್ಲಿ ಮುಂದೆ ಸಾಗ್ತಿದ್ದ ಮಹಿಳೆಯ ಈ ವರ್ತನೆ ಇತರರಲ್ಲಿ ಅಚ್ಚರಿ ತಂದಿತ್ತು. 2023 ರಲ್ಲಿ ಏನು ನಡೆಯುತ್ತಿದೆ ಎಂದು ಈ ವಿಡಿಯೋ ಚಿತ್ರೀಕರಿಸಿದ ಇತರೆ ಪ್ರಯಾಣಿಕರೊಬ್ಬರು ಅಚ್ಚರಿಪಡುತ್ತಿರುವುದನ್ನ ಕೇಳಬಹುದು. ಅಷ್ಟೇ ಅಲ್ಲದೇ ವಿಡಿಯೋ ಚಿತ್ರೀಕರಿಸುತ್ತಿದ್ದವರು ಈ ಮಹಿಳೆಗೆ ಏನನ್ನಾದರೂ ನೀಡಿ ಎಂದು ವಿಮಾನಯಾನ ಸಂಸ್ಥೆಯ ಗಮನವನ್ನೂ ಸೆಳೆಯಲೆತ್ನಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಇದೀಗ ಫೋರ್ಟ್ ಲಾಡರ್‌ಡೇಲ್-ಹಾಲಿವುಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸ್ಪಿರಿಟ್ ಏರ್‌ಲೈನ್ಸ್ ಅನ್ನು ತಲುಪಿದ್ದು ಗಮನ ಸೆಳೆದಿದೆ. ಆದರೆ ಮಹಿಳೆಯು ತನ್ನ ಪೃಷ್ಠದ ಬಹಿರಂಗವನ್ನು ಹೇಗೆ ಗಮನಿಸಲಿಲ್ಲ ಎಂಬುದರ ಕುರಿತು ಅನೇಕರು ತಮ್ಮದೇ ಆದ ರೀತಿಯಲ್ಲಿ ಊಹಿಸಿದ್ದಾರೆ.

https://twitter.com/OfficialUScrime/status/1708013811607707687?ref_src=twsrc%5Etfw%7Ctwcamp%5Etweetembed%7Ctwterm%5E1708013811607707687%7Ctwgr%5E890fb16841363c4469866f8fb90e76d7f95988e9%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Ftravellersleftstunnedashalfnakedwomantriestoboardplaneinfloridaviralvideo-newsid-n544599054

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read