ತೃತೀಯ ಲಿಂಗಿ ಹತ್ಯೆ ಪ್ರಕರಣ; ಆರೋಪಿ ಮಹಿಳೆ ಅರೆಸ್ಟ್

ಬೆಂಗಳೂರು: ತೃತೀಯ ಲಿಂಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಬೆಂಗಳೂರಿನ ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರೇಮ (51) ಬಂಧಿತ ಆರೋಪಿ. ಮೇ 3ರಂದು ಮನೆಯೊಂದರಲ್ಲಿ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ಕ್ (42) ಎಂಬ ತೃತೀಯ ಲಿಂಗಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ತೃತೀಯ ಲಿಂಗಿ ಜೊತೆ ವಾಸವಿದ್ದ ಮಹಿಳೆ ಪ್ರೇಮಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಬಂಧಿತ ಮಹಿಳೆ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.

ಪತಿ ಸಾವಿನ ಬಳಿಕ ಪ್ರೇಮ, ಮಂಜಿ ಬಾಯ್ ಜೊತೆ ವಾಸವಾಗಿದ್ದಳು. ಪ್ರೇಮ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಮಂಜಿ ಬಾಯ್ ಕಂಪನಿಯೊಂದರ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ. ಏಪ್ರಿಲ್ 26ರಂದು ಇಬ್ಬರ ನಡುವೆ ಮನೆಯಲ್ಲಿ ಜಗಳವಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿದ್ದು, ತೃತೀಯ ಲಿಂಗಿ ಮಂಜಿ ಬಾಯ್ ಮಹಿಳೆಗೆ ಚಾಕುವಿಂದ ಇರಿಯಲು ಮುಂದಾಗಿದ್ದಾನೆ. ಈ ವೇಳೆ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡ ಮಹಿಳೆ ಪ್ರೇಮಾ ಬಳಿಕ ಟವೆಲ್ ನಿಂದ ಮಂಜಿ ಬಾಯ್ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಳೆ. ಆರೋಪಿ ಪ್ರೇಮಾಳನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read