ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನ ಮನಬಂದಂತೆ ಎಳೆದು ಟಿಕೆಟ್ ಕಲೆಕ್ಟರ್ಸ್ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಟಿಕೆಟ್ ಕಲೆಕ್ಟರ್ ಗಳ ವರ್ತನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬಿಹಾರದ ಮುಜಾಫರ್‌ಪುರದಿಂದ ಹಾದು ಹೋಗುತ್ತಿದ್ದ ರೈಲಿನಲ್ಲಿ ಇಬ್ಬರು ಟಿಕೆಟ್ ಕಲೆಕ್ಟರ್‌ಗಳು ಏಕಾಂಗಿ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿರೋ ವಿಡಿಯೋ ಜನರನ್ನ ಬೆಚ್ಚಿಬೀಳಿಸಿದೆ.
ಕ್ಲಿಪ್‌ನಲ್ಲಿ, ಟಿಕೆಟ್ ಕಲೆಕ್ಟರ್ ಒಬ್ಬರು ಪ್ರಯಾಣಿಕನ ಕಾಲುಗಳನ್ನು ಎಳೆಯುತ್ತಿರುವುದನ್ನು ಕಾಣಬಹುದು. ರೈಲಿನ ಬೆಡ್ ಮೇಲೆ ಕುಳಿತಿದ್ದ ಪ್ರಯಾಣಿಕನನ್ನ ಕೆಳಗಿಳಿಸಲು ಇಬ್ಬರು ಟಿಕೆಟ್ ಕಲೆಕ್ಟರ್ ಎಳೆದಾಡಿ ಕಾಲಲ್ಲಿ ಒದ್ದಿದ್ದಾರೆ.
ಜನವರಿ 2 ರಂದು ಮುಂಬೈನಿಂದ ಜೈನಗರಕ್ಕೆ ತೆರಳುತ್ತಿದ್ದ ರೈಲು ಧೋಲಿ ನಿಲ್ದಾಣದಲ್ಲಿದ್ದಾಗ ಈ ಘಟನೆ ನಡೆದಿದೆ. ಪ್ರಯಾಣಿಕ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ. ಟಿಕೆಟ್ ಕಲೆಕ್ಟರ್‌ಗಳೊಂದಿಗೆ ಸಹಕರಿಸಲು ನಿರಾಕರಿಸಿದ್ದರಿಂದ ಹೊಡೆದಾಟ ಪ್ರಾರಂಭವಾಯಿತು ಎನ್ನಲಾಗಿದೆ.
ಪ್ರಯಾಣಿಕನ ತಪ್ಪಿದ್ದರೂ ಸಹ, ಪ್ರಯಾಣಿಕರ ಮೇಲೆ ಕೆಟ್ಟದಾಗಿ ಹಲ್ಲೆ ಮಾಡಿದ ಮತ್ತು ಪರಿಸ್ಥಿತಿಯಲ್ಲಿ ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಇಬ್ಬರು ಟಿಕೆಟ್ ಕಲೆಕ್ಟರ್‌ಗಳನ್ನು ಅಮಾನತುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆನ್‌ಲೈನ್‌ನಲ್ಲಿ ಜನರು ಈ ವಿಷಯದ ಬಗ್ಗೆ ಪರ- ವಿರೋಧವಾಗಿ ಚರ್ಚಿಸುತ್ತಿದ್ದಾರೆ.
https://twitter.com/ndtv/status/1611239185184362496?ref_src=twsrc%5Etfw%7Ctwcamp%5Etweetembed%7Ctwterm%5E1611258755202809857%7Ctwgr%5Ed2b63091e5ea35ffc6efd9973a833c2af47b27d7%7Ctwcon%5Es2_&ref_url=https%3A%2F%2Fwww.indiatimes.com%2Ftrending%2Fsocial-relevance%2Ftrain-ticket-checkers-in-bihar-assault-passenger-in-video-589627.html%3Futm_source%3Dmsn.com