ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇರುವಲ್ಲೇ ಟಿಕೆಟ್ ವಿತರಿಸಲು ಹೊಸ ಸೌಲಭ್ಯ ಜಾರಿ

ಬೆಂಗಳೂರು: ರೈಲ್ವೆ ಟಿಕೆಟ್ ವಿತರಣೆ ವ್ಯವಸ್ಥೆಯನ್ನು ನೈರುತ್ಯ ರೈಲ್ವೆ ಬೆಂಗಳೂರು ವಲಯ ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಿದೆ.

ಕಾಯ್ದಿರಿಸದ ಮೊಬೈಲ್ ಟಿಕೆಟ್ ವ್ಯವಸ್ಥೆ ಬದಲಾಗಿ(ಎಂ-ಯುಟಿಎಸ್) ನಡಿ ಕೌಂಟರ್ ಬದಲಾಗಿ ಪ್ರಯಾಣಿಕರ ಬಳಿಗೇ ಹೋಗಿ ತ್ವರಿತವಾಗಿ ಟಿಕೆಟ್ ವಿತರಿಸುವ ಸೌಲಭ್ಯ ಜಾರಿಗೆ ತಂದಿದೆ. ಬೆಂಗಳೂರಿನ ಕೆಎಸ್ಆರ್, ಯಶವಂತಪುರ, ಎಸ್ಎಂವಿಟಿ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ನಿಲ್ದಾಣದ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರು ಇದರ ಮೂಲಕ ಟಿಕೆಟ್ ಖರೀದಿಸಬಹುದು.

ಟಿಕೆಟ್ ವಿತರಣೆ ಪ್ರಕ್ರಿಯೆ ಸರಳ, ವೇಗವಾಗಿದ್ದು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಸೌಲಭ್ಯ ಜಾರಿಗೊಳಿಸಲಾಗಿದೆ. ಅದಕ್ಕಾಗಿ ನವೀನ ಸಾಧನ ವಿನ್ಯಾಸಗೊಳಿಸಲಾಗಿದೆ. ರೈಲ್ವೆ ಇಲಾಖೆ ಸಿಬ್ಬಂದಿ ಹ್ಯಾಂಡ್ ಹೆಲ್ಡ್ ಸಾಧನಗಳನ್ನು ನಿರ್ವಹಿಸಿ ಪ್ರಯಾಣಿಕರಿಗೆ ತ್ವರಿತವಾಗಿ ಟಿಕೆಟ್ ವಿತರಿಸಲಿದ್ದಾರೆ.

ರೈಲು ನಿಲ್ದಾಣಗಳಲ್ಲಿ ಸಾಮಾನ್ಯವಾಗಿರುವ ಸಾಂಪ್ರದಾಯಿಕ ಟಿಕೆಟ್ ಕೌಂಟರ್ ಗಳ ರೀತಿ ಈ ಯಂತ್ರಗಳಿಗೆ ನಿಶ್ಚಿತ ಜಾಗ ಮತ್ತು ಇತರ ಸಾಧನ ಅಗತ್ಯವಿಲ್ಲ. ನಿಲ್ದಾಣದ ಯಾವುದೇ ಸ್ಥಳಗಳಲ್ಲಿಯೂ ಟಿಕೆಟ್ ನೀಡಬಹುದು. ಮುಂದಿನ ಹಂತದಲ್ಲಿ ಇತರೆ ಜನದಟ್ಟಣೆಯ ನಿಲ್ದಾಣಗಳಲ್ಲಿಯೂ ಈ ಸೌಲಭ್ಯ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read