ನಿಗದಿತ ನಿಲ್ದಾಣದಲ್ಲಿ ನಿಲ್ಲದೇ ಮುಂದೆ ಸಾಗಿದ ರೈಲು; ಕೂಡಲೇ ರಿವರ್ಸ್ ಬಂದ ಲೋಕೋ ಪೈಲಟ್

ಪ್ರಯಾಣಿಕರು ಇಳಿಯಲು ಕಾಯುತ್ತಿದ್ದ ನಡುವೆಯೇ ನಿಲ್ದಾಣವೊಂದರಲ್ಲಿ ನಿಲುಗಡೆ ನೀಡದೇ ಮುಂದೆ ಸಾಗಿದ್ದ ರೈಲೊಂದು ಕೆಲ ಕ್ಷಣಗಳ ಬಳಿಕ 700 ಮೀಟರ್‌ನಷ್ಟು ಹಿಂದಕ್ಕೆ ಬಂದು ಅದೇ ನಿಲ್ದಾಣದಲ್ಲಿ ನಿಂತ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಚೆರಿಯನಾಡ್ ನಿಲ್ದಾಣದಲ್ಲಿ ಘಟಿಸಿದೆ.

ಈ ನಿಲುಗಡೆಯನ್ನು ತಾನು ತಪ್ಪಿಸಿದ್ದೇನೆ ಎಂದು ಕೂಡಲೇ ಅರಿತ ಲೋಕೋ ಪೈಲಟ್ ಕೂಡಲೇ ರೈಲನ್ನು ಹಿಂದಕ್ಕೆ ತಂದಿದ್ದಾರೆ. ಮವೆಲಿಕ್ಕಾರಾ ಮತ್ತು ಚೆಂಗನಲ್ಲೂರು ನಿಲ್ದಾಣಗಳ ನಡುವೆ ಬರುವ ಚೆರಿಯನಾಡ್ ನಿಲ್ದಾಣದಲ್ಲಿ ಬೆಳಿಗ್ಗೆ 7:45ಕ್ಕೆ ಈ ರೈಲು ನಿಲ್ಲಬೇಕಿತ್ತು.

ತಿರುವನಂತಪುರಂನಿಂದ ಹೊರಟಿದ್ದ ವೆನಾಡ್ ಎಕ್ಸ್‌ಪ್ರೆಸ್‌ ರೈಲು – 16302 – ಈ ಘಟನೆಯಿಂದ ಸುದ್ದಿ ಮಾಡಿದೆ. ಈ ಅನಾನುಕೂಲದ ವಿರುದ್ಧ ಯಾವುದೇ ಪ್ರಯಾಣಿಕರು ದೂರು ನೀಡಿಲ್ಲ.

ಸಿಗ್ನಲ್ ಅಥವಾ ಸ್ಟೇಷನ್ ಮಾಸ್ಟರ್‌ರ ಗೈರಿನ ಕಾರಣ ಲೋಕೋ ಪೈಲಟ್ ಹೀಗೆ ಮಾಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರಣದಿಂದಾಗಿ ರೈಲಿನ ವೇಳಾಪಟ್ಟಿಯಲ್ಲಿ 8 ನಿಮಿಷಗಳ ವ್ಯತ್ಯಯವಾಗಿದ್ದು, ಈ ವ್ಯತ್ಯಾಸವನ್ನು ಲೋಕೋ ಪೈಲಟ್‌ ಸರಿದೂಗಿಸಿದ್ದಾರೆ.

ಈ ವಿಚಾರವಾಗಿ ಲೋಕೋ ಪೈಲಟ್‌ನಿಂದ ವಿವರಣೆ ಕೋರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read