ಕಾಣೆಯಾದ ಮೀನುಗಾರನ ಶವ ಮೊಸಳೆ ಹೊಟ್ಟೆಯಲ್ಲಿ ಪತ್ತೆ……!

ಆಸ್ಟ್ರೇಲಿಯಾ: ಇಲ್ಲಿಯ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮೊಸಳೆಯೊಳಗೆ ಪತ್ತೆಯಾಗಿರುವ ಘಟನೆ ನಡೆದಿದೆ.

65 ವರ್ಷದ ಮೀನುಗಾರನನ್ನು ಕೆವಿನ್ ದರ್ಮೋಡಿ ಎಂದು ಹೇಳಲಾಗಿದೆ. ಅವರು ಕೊನೆಯದಾಗಿ ಕೆನಡಿಸ್ ಬೆಂಡ್‌ನಲ್ಲಿ ಕಾಣಿಸಿಕೊಂಡಿದ್ದರು. ಉತ್ತರ ಕ್ವೀನ್ಸ್‌ಲ್ಯಾಂಡ್‌ನ ದೂರದ ಭಾಗದಲ್ಲಿ ಪ್ರಸಿದ್ಧ ಉಪ್ಪುನೀರಿನ ಮೊಸಳೆ ಆವಾಸಸ್ಥಾನದಲ್ಲಿ ಅವರು ನಾಪತ್ತೆಯಾಗಿದ್ದರು.

ಈ ಪ್ರದೇಶದಲ್ಲಿ ಎರಡು ದಿನಗಳ ಹುಡುಕಾಟದ ನಂತರ, ಪೊಲೀಸರು ಸೋಮವಾರ 4.1 ಮೀ ಮತ್ತು 2.8 ಮೀ ಉದ್ದದ ಎರಡು ದೊಡ್ಡ ಮೊಸಳೆಗಳನ್ನು ಸಾಯಿಸಿದರು. ಈ ಸಂದರ್ಭದಲ್ಲಿ ಒಂದು ಮೊಸಳೆಯ ಹೊಟ್ಟೆಯೊಳಗೆ ವ್ಯಕ್ತಿಯ ಶವ ಸಿಕ್ಕಿದೆ.

ಆಸ್ಟ್ರೇಲಿಯಾದ ಉಷ್ಣವಲಯದ ಉತ್ತರದಲ್ಲಿ ಮೊಸಳೆಗಳು ಸಾಮಾನ್ಯವಾಗಿದೆ, ಆದರೆ ದಾಳಿಗಳು ಅಪರೂಪ ಎಂದು ಬಿಬಿಸಿ ವರದಿ ಮಾಡಿದೆ. 1985ರಲ್ಲಿ ದಾಖಲಾತಿ ಆರಂಭವಾದಾಗಿನಿಂದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ದಾರ್ಮೋಡಿಯ ಸಾವು 13ನೇ ಮಾರಣಾಂತಿಕ ದಾಳಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read