ಮಕ್ಕಳ ದುರಂತ ಅಂತ್ಯ: ಆಟವಾಡಲು ಹೋದವರು ಉಸಿರುಗಟ್ಟಿ ಸಾವು !

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಘಟನೆಯೊಂದು ಇಬ್ಬರು ಮುದ್ದು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ನಾಲ್ಕು ಮತ್ತು ಐದು ವರ್ಷದ ಇಬ್ಬರು ಬಾಲಕಿಯರು ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ದುರಂತ ಸೋಮವಾರ ದಮರ್‌ಗಿದ್ದ ಗ್ರಾಮದ ಬಳಿ ನಡೆದಿದೆ.

ಕುಟುಂಬಸ್ಥರ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಈ ಇಬ್ಬರು ಸಂಬಂಧಿ ಬಾಲಕಿಯರು ಆಟವಾಡುತ್ತಾ ಹತ್ತಿರದಲ್ಲಿದ್ದ ಸಂಬಂಧಿಕರ ಮನೆಯ ಬಳಿ ನಿಲ್ಲಿಸಿದ್ದ ಕಾರಿಗೆ ಹತ್ತಿದ್ದಾರೆ. ಮಕ್ಕಳು ಕಾರಿನೊಳಗೆ ಸಿಲುಕಿಕೊಂಡಿರುವುದು ಮನೆಯವರಿಗೆ ತಿಳಿದಿರಲಿಲ್ಲ. ಅವರು ಹೊರಗೆ ಆಟವಾಡುತ್ತಿರಬಹುದೆಂದು ಭಾವಿಸಿದ್ದರು. ಸುಮಾರು ಎರಡು ಗಂಟೆಗಳ ನಂತರ, ಮಧ್ಯಾಹ್ನ 2 ಗಂಟೆಗೆ ಕುಟುಂಬ ಸದಸ್ಯರು ಕಾರನ್ನು ಪರಿಶೀಲಿಸಿದಾಗ, ಬಾಲಕಿಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತಕ್ಷಣವೇ ಕಾರಿನ ಬಾಗಿಲು ತೆರೆದು ಮಕ್ಕಳನ್ನು ಹತ್ತಿರದ ಚೆವೆಲ್ಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯ̧ರು ಬಾಲಕಿಯರು ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಮದುವೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೋಷಕರು ಮತ್ತು ಮಕ್ಕಳು ದಮರ್‌ಗಿದ್ದಕ್ಕೆ ಬಂದಿದ್ದಾಗ ಈ ದುರಂತ ಸಂಭವಿಸಿದೆ.

ಈ ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಉಸಿರುಗಟ್ಟುವಿಕೆಯೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read